ನವದೆಹಲಿ: ಭಾರತೀಯ ಕ್ರಿಕೆಟ್ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ಮೈದಾನದಲ್ಲಿನ ತಮ್ಮ ವರ್ತನೆಗಳಿಗೆ ಹೆಸರುವಾಸಿಯಾಗಿದ್ದಾರೆ, ಇದು ಅವರ ಅಭಿಮಾನಿಗಳನ್ನು ರಂಜಿಸುತ್ತದೆ. ಪ್ರೇಕ್ಷಕರನ್ನು ಜೋರಾಗಿ ಹುರಿದುಂಬಿಸುವುದರಿಂದ ಹಿಡಿದು ತಮ್ಮ ತಂಡದ ಆಟಗಾರರನ್ನು ಅನುಕರಿಸುವವರೆಗೆ, ಕೊಹ್ಲಿಯ ಉತ್ಸಾಹ ಯಾವಾಗಲೂ ಪ್ರದರ್ಶನಗೊಳ್ಳುತ್ತದೆ. ದುಬೈನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಭಾರತದ ಅಂತಿಮ ಹಂತದ ಹಣಾಹಣಿಯ ಸಮಯದಲ್ಲಿ , ಅಂತಹ ಮತ್ತೊಂದು ಕ್ಷಣ ವೈರಲ್ ಆಗಿದೆ.
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೇನ್ ವಿಲಿಯಮ್ಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ್ದರು.ವಿಲಿಯಮ್ಸನ್ ವಿಕೆಟ್ ಸಿಗುತ್ತಿದ್ದಂತೆ ಅಕ್ಷರ್ ಪಟೇಲ್ ಬಳಿ ಧಾವಿಸಿ ಬಂದ ವಿರಾಟ್ ಕೊಹ್ಲಿ ಕಾಲಿಗೆ ನಮಸ್ಕರಿಸಿದ್ದಾರೆ. ಕೊಹ್ಲಿಯ ಈ ಕಾಲೆಳೆಯುವಿಕೆಗೆ ಅಕ್ಷರ್ ಬಿದ್ದು ಬಿದ್ದು ನಗುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ನ್ಯೂಜಿಲೆಂಡ್ನ ಟಾಪ್ ಸ್ಕೋರರ್ ಕೇನ್ ವಿಲಿಯಮ್ಸನ್ ಅವರನ್ನು ಔಟ್ ಮಾಡಿದ ನಂತರ ಕೊನೆಗೂ ಕೇನ್ ವಿಲಿಯಮ್ಸನ್ ಅನ್ನು ಔಟ್ ಮಾಡಿದ್ದೀಯಾ, ನಿನ್ನ ಪಾದಕ್ಕೆ ದೊಡ್ಡ ನಮಸ್ಕಾರ ಎಂಬಾರ್ಥದಲ್ಲಿ ವಿರಾಟ್ ಕೊಹ್ಲಿ ಅಕ್ಷರ್ ಪಟೇಲ್ ಅವರ ಕಾಲಿಗೆ ಬಿದ್ದು ಕಾಲೆಳೆದಿದ್ದಾರೆ. ಕೊನೆಗೂ ಟೀಮ್ ಇಂಡಿಯಾ ನೀಡಿದ 249 ರನ್ಗಳ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡ 205 ರನ್ಗಳಿಗೆ ಆಲೌಟ್ ಆಗಿ 44 ರನ್ಗಳಿಂದ ಸೋಲೊಪ್ಪಿಕೊಂಡಿದೆ.