ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್ನ ವಂತಾರಾದಲ್ಲಿ ವನ್ಯಜೀವಿಗಳ ಜೊತೆ ಆಟವಾಡಿದ್ದಾರೆ. ಹುಲಿ ಮತ್ತು ಸಿಂಹದ ಮರಿಗಳ ಜೊತೆ ಪ್ರಧಾನಿ ಮೋದಿ ಆಟವಾಡಿದ್ದು ವಿಶೇಷ ಎನಿಸಿತ್ತು.
ಗುಜರಾತ್ನ ಜಾಮ್ನಗರದ ಜಿಲ್ಲೆಯಲ್ಲಿರುವ ವಂತಾರದಲ್ಲಿ ಗಾಯಗೊಂಡ ವನ್ಯಜೀವಿಗಳನ್ನ ರಕ್ಷಣೆ ಮಾಡಿ ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.
ಇಂದು ಅದೇ ವಂತಾರಾಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಮುದ್ದು ಮುದ್ದಾಗಿರುವ ಹುಲಿ, ಸಿಂಹದ ಮರಿಗಳ ಜೊತೆ ಆಟವಾಡಿ ಆನಂದಿಸಿದರು. ವಂತಾರಾ ಕೇಂದ್ರದಲ್ಲಿ ಬರೋಬ್ಬರಿ 1.5 ಲಕ್ಷ ವನ್ಯಜೀವಿಗಳನ್ನು ರಕ್ಷಿಸಲಾಗಿದೆ. ಅವುಗಳಿಗೆ ಸರಿಯಾದ ಚಿಕಿತ್ಸೆ ನೀಡಿ ಅವುಗಳನ್ನು ಗುಣಮುಖಗೊಳಿಸುವ ಕಾರ್ಯವನ್ನು ಮಾಡಲಾಗುತ್ತದೆ.
ಅತ್ಯಾಧುನಿಕ ಪಶು ಚಿಕಿತ್ಸಾ ಕೇಂದ್ರದ ಸೌಲಭ್ಯಗಳನ್ನು ವೀಕ್ಷಿಸಿದ ಮೋದಿ ಹುಲಿ, ಸಿಂಹಗಳ ಜೊತೆ ಜಿರಾಫೆ, ಆನೆ, ಗಿಣಿ ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳ ವೀಕ್ಷಣೆ ಮಾಡಿದರು. ಜೊತೆಗೆ ಹುಲಿ ಹಾಗೂ ಸಿಂಹದ ಮರಿಗಳಿಗೆ ಹಾಲು ಕುಡಿಸಿ ಆರೈಕೆ ಮಾಡಿದರು. ಪ್ರಧಾನಿ ಮೋದಿ ವಂತಾರಾಕ್ಕೆ ಭೇಟಿ ನೀಡಿದ ವಿಡಿಯೋ ಈಗ ಬಿಡುಗಡೆಯಾಗಿದೆ.