ಭುವನೇಶ್ವರ: ವಿದೇಶಿ ಮಹಿಳೆಯೊಬ್ಬರು ತಮ್ಮ ತೊಡೆಯ ಮೇಲೆ ಜಗನ್ನಾಥ ದೇವರ ಹಚ್ಚೆ ಹಾಕಿಸಿಕೊಂಡಿದ್ದು, ಒಡಿಶಾದಲ್ಲಿ ವಿವಾದಕ್ಕೆ ಕಾರಣವಾಗಿದೆ.
ಇನ್ನು ಮಹಿಳೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಭುವನೇಶ್ವರದ ಟ್ಯಾಟೂ ಪಾರ್ಲರ್ನಲ್ಲಿ ಈ ಟ್ಯಾಟೂ ಹಾಕಿಸಿಕೊಂಡ ಮಹಿಳೆಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ ನಂತರ ಜಗನ್ನಾಥ ಭಕ್ತರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮಹಿಳೆ ಎನ್ಜಿಒ (ಸರಕಾರೇತರ ಸಂಸ್ಥೆ) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಭಾನುವಾರ ಜಗನ್ನಾಥ ಭಕ್ತರು ಸಹಿದ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಮಹಿಳೆ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 299 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸೆಕ್ಷನ್ ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅಪಮಾನ ಮಾಡುವ ಉದ್ದೇಶದಿಂದ ಕೃತ್ಯ ಎಸಗಿದರೆ ದಂಡಾತ್ಮಕ ಕ್ರಮ ಕೈಗೊಳ್ಳಲು ಅವಕಾಶ ನೀಡುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ದೂರು ಸಲ್ಲಿಸಿದ ಸುಬ್ರತ್ ಮೋಹಾನಿ, “ಶ್ರೀ ಜಗನ್ನಾಥನ ಟ್ಯಾಟೂ ಅನ್ನು ಅಸಭ್ಯ ಸ್ಥಳದಲ್ಲಿ ಹಾಕಿಸಿಕೊಂಡಿರುವ ಕಾರಣ ನಮ್ಮ ಧಾರ್ಮಿಕ ಭಾವನೆಗಳಿಗೆ ಹಾನಿ ತಂದಿದೆ.
ಇದು ಎಲ್ಲ ಜಗನ್ನಾಥ ಭಕ್ತರು ಹಾಗೂ ಹಿಂದೂ ಸಮಾಜದ ಮೇಲೆ ಮಾಡಿರುವ ಅಪಮಾನ. ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾವು ಎಫ್ಐಆರ್ ದಾಖಲಿಸಿದ್ದೇವೆ,” ಎಂದು ಹೇಳಿದ್ದಾರೆ. ವಿವಾದ ಉಲ್ಬಣಗೊಂಡ ನಂತರ, ವಿದೇಶೀ ಮಹಿಳೆ ಮತ್ತು ಟ್ಯಾಟೂ ಪಾರ್ಲರ್ ಮಾಲೀಕರು ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ. “ನಾನು ಶ್ರೀ ಜಗನ್ನಾಥನನ್ನು ಅವಮಾನಿಸಲು ಇಚ್ಛಿಸಿದಲ್ಲ.
ನಾನು ನಿಜವಾದ ಜಗನ್ನಾಥ ಭಕ್ತೆ ಮತ್ತು ಪ್ರತಿದಿನ ದೇವಾಲಯಕ್ಕೆ ಹೋಗುತ್ತೇನೆ. ನಾನು ತಪ್ಪು ಮಾಡಿದ್ದೇನೆ ಮತ್ತು ಇದಕ್ಕಾಗಿ ವಿಷಾದವಿದೆ. ನಾನು ಟ್ಯಾಟೂ ಕಲಾವಿದನಿಗೆ ಒಂದು ಗುಪ್ತ ಸ್ಥಳದಲ್ಲಿ ಟ್ಯಾಟೂ ಹಾಕಿ ಎಂದು ಮಾತ್ರ ಕೇಳಿದೆ. ಆದರೆ ಇದರಿಂದ ಈ ಮಟ್ಟದ ವಿವಾದ ಸೃಷ್ಟಿಯಾಗುತ್ತದೆ ಎಂದು ನಾನು ಊಹಿಸಲಿಲ್ಲ. ನನ್ನ ತಪ್ಪಿಗೆ ಕ್ಷಮಿಸಿ. ಶೀಘ್ರದಲ್ಲಿಯೇ ಈ ಟ್ಯಾಟೂ ತೆಗೆಸಿಕೊಳ್ಳುತ್ತೇನೆ’ ಎಂದು ಮಹಿಳೆ ಹೇಳಿದ್ದಾರೆ.