ಹೃದಯದ ಆರೋಗ್ಯ: ಪೊಟ್ಯಾಶಿಯಂ, ಫೈಬರ್ ಮತ್ತು ವಿಟಮಿನ್ ಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತವೆ. ಕೊಲೆಸ್ಟ್ರಾಲ್ ನಿಯಂತ್ರಣ ಹಾಗೂ ರಕ್ತ ಪರಿಚಲನೆ ಸುಧಾರಣೆ ಮೂಲಕ ಹೃದಯಾಘಾತ ಅಪಾಯ ಕಡಿಮೆಯಾಗುತ್ತದೆ.
ತ್ವಚೆಯ ಕಾಂತಿ ಹೆಚ್ಚಿಸುತ್ತದೆ: ಪಪ್ಪಾಯದಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಹಾಗೂ ವಿಟಮಿನ್ ಗಳು ಚರ್ಮದ ಆರೋಗ್ಯ ಹೆಚ್ಚಿಸುತ್ತವೆ. ಸುಕ್ಕುಗಳ ತಡೆ, ನಯಗೊಳಿಸುವಿಕೆ ಹಾಗೂ ಯೌವನದ ಹೊಳಪು ನೀಡಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆ ಸುಧಾರಣೆ: ಪಪೈನ್ ಎಂಬ ಕಿಣ್ವ ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ, ಮಲಬದ್ಧತೆ ತಡೆಯಲು ಸಹಕಾರಿಯಾಗಿದೆ.
ಡಯಾಬಿಟಿಸ್ ನಿಯಂತ್ರಣ: ಕಡಿಮೆ ಸಕ್ಕರೆ ಹಾಗೂ ಹೆಚ್ಚಿನ ಫೈಬರ್ ಅಂಶದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸಬಹುದು.
ಕಣ್ಣಿನ ಆರೋಗ್ಯ: ವಿಟಮಿನ್ ಸಿ, ಇ ಹಾಗೂ ಬೀಟಾ ಕ್ಯಾರೋಟಿನ್ ದೃಷ್ಟಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ.
ತೂಕ ನಿಯಂತ್ರಣ: ಹೊಟ್ಟೆ ತುಂಬಿದಂತೆ ಭಾಸವಾಗಿಸಿ, ಹೆಚ್ಚಿನ ಊಟದ ನಿಯಂತ್ರಣ ಮಾಡಬಹುದು.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣ ದೇಹದ ಪ್ರತಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಕ್ಯಾನ್ಸರ್ ತಡೆಗಟ್ಟುವಿಕೆ: ಲೈಕೋಪೀನ್ ಅಂಶ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದರಿಂದಾಗುವ ಅಡ್ಡ ಪರಿಣಾಮಗಳು
ಗರ್ಭಿಣಿಯರು ಪಪ್ಪಾಯ ಸೇವನೆ ತಪ್ಪಿಸಬೇಕು, ಅದು ಗರ್ಭಪಾತಕ್ಕೆ ಕಾರಣವಾಗಬಹುದು.
ಹೆಚ್ಚು ಸೇವಿಸಿದರೆ ಅನ್ನನಾಳಕ್ಕೆ ಹಾನಿಯಾಗಬಹುದು.
ಕಡಿಮೆ ಬಿಪಿ ಇರುವವರು ಜಾಗರೂಕರಾಗಿರಬೇಕು.
ಅಲರ್ಜಿ ಸಮಸ್ಯೆ ಇರುವವರಿಗೆ ಪಪ್ಪಾಯ ಅನಾನುಕೂಲವಾಗಬಹುದು.