ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರೋ ಕಾಶಿ ವಿಶ್ವನಾಥನ ಸನ್ನಿಧಿಗೆ ನಟಿ ಕಾವ್ಯಾ ಶಾಸ್ತ್ರಿ ಅವರು ಭೇಟಿ ಕೊಟ್ಟಿದ್ದಾರೆ. ನಿನ್ನ ಸನ್ನಿಧಾನದಲ್ಲಿ ಭಿಕ್ಷೆ ಬೇಡಿ ಊಟ ಮಾಡುತ್ತೇನೆ ಅಂತ ಹರಕೆ ಹೊತ್ತಿಕೊಂಡಿದ್ದರು. ಇದೀಗ ಆ ಹರಕೆಯನ್ನು ನಟಿ ತಿರಿಸಿದ್ದಾರೆ.
‘ಕೊರೋನಾದಿಂದಾಗಿ ನನ್ನ ತಂದೆ ಕಳೆದೇ ಹೋಗುತ್ತಾರೆ ಎನ್ನುವ ಭಯದಲ್ಲಿ ಸಿಕ್ಕಸಿಕ್ಕ ದೇವರಿಗೆ, ಸಿಕ್ಕಸಿಕ್ಕ ಹರಕೆ ಹೊತ್ತುಕೊಂಡಿದ್ದೆ. ಅದರಲ್ಲಿ ಒಂದು ಹರಕೆ ಇದು. ಕಾಶಿ ವಿಶ್ವನಾಥನ ಸನ್ನಿಧಿ. ಕಾಶಿ ವಿಶ್ವನಾಥನಲ್ಲಿ, ನನ್ನ ತಂದೆಯ ಜೀವದ ಭಿಕ್ಷೆ ಕೊಡು. ನಿನ್ನ ಸನ್ನಿಧಾನದಲ್ಲಿ ಭಿಕ್ಷೆ ಬೇಡಿ, ಅದರಿಂದ ಬಂದ ಹಣದಲ್ಲಿ ಒಂದಿಡೀ ದಿನದ ಊಟ ಮಾಡ್ತೇನೆ ಅಂತ ಕೇಳಿಕೊಂಡಿದ್ದೆ.
ಈ ಹರಕೆ ತೀರಿಸುವ ಸೌಭಾಗ್ಯ ನಾನು ಮೊನ್ನೆ ಕಾಶಿಗೆ ಹೋದಾಗ ಸಿಕ್ಕಿತು. ಇದೇನು ಅಂಧ ವಿಶ್ವಾಸ ಅಂತ ನೀವು ಕೇಳಬಹುದು. ಒಂದು ಹೇಳ್ತೀನಿ ಕೇಳಿ. ಕಷ್ಟದಲ್ಲಿದ್ದಾಗ ಅದನ್ನು ನಿವಾರಿಸಿಕೊಳ್ಳಲು ಏನನ್ನಾದರೂ ಮಾಡುವ ಪರಿಸ್ಥಿತಿಗೆ ಬಂದು ಬಿಡ್ತೀವಿ…’ ಎಂದು ಹೇಳಿ ಭಿಕ್ಷೆ ಬೇಡಿ ಅದರಿಂದ ಬಂದ ಹಣದಲ್ಲಿ ಊಟ ಮಾಡಿದ್ದಾರೆ
. ಹಿಂದೂ ಧರ್ಮದಲ್ಲಿ ಭಿಕ್ಷಾಟನೆಗೆ ಒಂದು ಪವಿತ್ರವಾದ ಸ್ಥಾನವಿದೆ. ಅದು ನಾನು, ನನ್ನದು ಅನ್ನೋ ಅಹಂಕಾರ ಮತ್ತು ಮೋಹ ಎಲ್ಲದನ್ನೂ ಕಲಿಸಿಬಿಡುತ್ತದೆ ಎಂದಿದ್ದಾರೆ.