ಚಿಕ್ಕಮಗಳೂರು: ತಂಗಿಯ ಜೊತೆ ಅಣ್ಣನೋರ್ವ ದೈಹಿಕ ಸಂಪರ್ಕ ಬೆಳೆಸಿದ್ದು, ಅಣ್ಣನಿಂದ ಗರ್ಭಾವತಿಯಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಇದೀಗ ಆತನ ತಂಗಿ 7 ತಿಂಗಳ ಗರ್ಭಿಣಿ ಆಗಿದ್ದಾಳೆ. ಪಿಯುಸಿ ಕಾಲೇಜಿನ ಮೆಟ್ಟಿಲೇರಿದ್ದ ಚಿಕ್ಕಪ್ಪನ ಮಗಳನ್ನು ಕಾಲೇಜಿಗೆ ಬಿಡುವುದು ಹಾಗೂ ಕರೆದುಕೊಂಡು ಬರುವುದನ್ನು ಮಾಡಿದ್ದಾನೆ. ಆದರೆ, ಅದ್ಯಾವಾಗ ತಂಗಿಯ ಮೇಲೆ ಕಣ್ಣು ಹಾಕಿದ್ದಾನೋ ಗೊತ್ತಿಲ್ಲ. ಇದೀಗ ಸ್ವಂತ ಚಿಕ್ಕಪ್ಪನ ಮಗಳನ್ನೇ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ.
ಈ ವಿಚಾರವನ್ನು ಮನೆಯಲ್ಲಿ ಯಾರಿಗೂ ಹೇಳದಂತೆ ಗುಟ್ಟಾಗಿ ಕಾಪಾಡುವಂತೆ ಬೆದರಿಕೆಯನ್ನೂ ಹಾಕಿದ್ದಾನೆ. ಇನ್ನು ಕಾಲೇಜಿಗೆ ಹೋಗುತ್ತಿದ್ದ ಮಗಳಿಗೆ ಸುಸ್ತಾಗುವುದು ಹಾಗೂ ಹೊಟ್ಟೆ ಮುಂದಕ್ಕೆ ಬಂದಿರುವುದನ್ನು ಮನೆಯವರು ಗಮನಿಸಿದ್ದಾರೆ. ಆಗ ಪರೀಕ್ಷೆ ಮಾಡಿದಾಗ ಆಕೆ ಗರ್ಭಿಣಿ ಎಂಬ ಮಾಹಿತಿ ತಿಳಿದುಬಂದಿದೆ. ಆಗ ಅಪ್ರಾಪ್ತ ವಯಸ್ಸಿನ ಮಗಳನ್ನು ಗರ್ಭಿಣಿ ಮಾಡಿದ ಪಾಪಿ ಯಾರೆಂದು ಮಗಳಿಂದ ಬಾಯಿ ಬಿಡಿಸಿದ್ದಾರೆ.
ಬೇರೆ ಯಾರೋ ಅಲ್ಲ, ಮನೆಯಲ್ಲಿಯೇ ಇರುವ ದೊಡ್ಡಪ್ಪನ ಮಗ ಶಶಾಂಕ್ (20) ತಂಗಿಯ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ.
ಈ ಘಟನೆಯ ಬೆನ್ನಲ್ಲಿಯೇ ಸಂತ್ರಸ್ತ ಬಾಲಕಿಯ ಪೋಷಕರು ಶಶಾಂಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಶಶಾಂಕ್ ವಿರುದ್ಧ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆರೋಪಿ ಶಶಾಂಕ್ ನ್ಯಾಯಾಂಗ ಬಂಧನದಲ್ಲಿದ್ದಾನೆ.