ಚಿತ್ರದುರ್ಗ: ನಮ್ಮಲ್ಲಿ ಆಕಸ್ಮಿಕ ಕಾಡಿನ ಬೆಂಕಿ ಪ್ರಮಾಣ ಶೇ.1ರಷ್ಟಿದ್ದರೆ ಮಾನವನ ಹೊಟ್ಟೆಯುರಿಗೆ ಶೇ.99ರಷ್ಟು ಅರಣ್ಯ ಬೆಂದು ಹೋಗುತ್ತಿರುವುದು ಬಹಿರಂಗ ಸತ್ಯ. ಹಚ್ಚೋರು ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ. ಕಾಡಿನೊಳಗೆ ಇರುವ ಪ್ರಾಣಿ, ಪಕ್ಷಿ, ಜೀವ ವೈವಿಧ್ಯಗಳು ಮತ್ತು ಮರಗಳು ಬೆಂಕಿಗೆ ಹಾನಿಯಾಗುತ್ತವೆ ಎಂದು ಚಿತ್ರದುರ್ಗ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ಆತಂಕ ವ್ಯಕ್ತಪಡಿಸಿದರು.
ಚಿತ್ರದುರ್ಗದ ಹತ್ತಿರದಲ್ಲಿರುವ ಹುಲಿದೋಣಿ ಬೆಟ್ಟದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಕಾರಣ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಪದಾಧಿಕಾರಿಗಳು ಅದರ ವೀಕ್ಷಣೆ ಮತ್ತು ಅಪಾಯದ ಹಿನ್ನೆಲೆಯನ್ನ ಅಧ್ಯಯನ ಮಾಡುವ ಕೆಲಸವನ್ನು ಮಾಡಿದರು. ಹುಲಿದೋಣಿ ಬೆಟ್ಟಗಳ ತಪ್ಪಲಿನಲ್ಲಿ ಸಂಭವಿಸಿದ್ದ ಬೆಂಕಿ ಅವಗಡದ ಕುರಿತು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಸಂಚಾಲಕರಾದ ಟಿ.ರುದ್ರಮುನಿ ಅವರು ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ತಂಡದೊAದಿಗೆ ಅಧಿಕಾರಿಗಳ ಗಮನಕ್ಕೆ ಬೆಂಕಿ ದುರಂತದ ಬಗ್ಗೆ ಚರ್ಚೆ ಮಾಡಿದ್ದರು.
ಮಾರ್ಚ ತಿಂಗಳಿನಲ್ಲಿ ದಿನೆದಿನೇ ಬಿಸಿಲಿನ ತಾಪಮಾನ ಹೆಚ್ಚಿದ್ದು ಹಲವಾರು ಪ್ರಾಣಿ ಪಕ್ಷಿಗಳಿಗೆ ತಿನ್ನಲು ಆಹಾರ ವಿಲ್ಲದಂತಾಗಿರುವ ಈ ಸಂದರ್ಭದಲ್ಲಿ ಪಕ್ಷಿಗಳಿಗೆ ಗುಡ್ಡದಲ್ಲಿರುವ ಚಿಕ್ಕ ಚಿಕ್ಕ ಕೀಟಗಳು ಆಹಾರವಾಗುತ್ತದೆ ಮತ್ತು ಮುಂಗುಸಿ ಹಾವುಗಳಂತ ಪ್ರಾಣಿಗಳಿಗೆ ಕೀಟಗಳು ಆಹಾರವಾಗುತ್ತದೆ ಈ ರೀತಿ ಗುಡ್ಡಕ್ಕೆ ಬೆಂಕಿ ಹಚ್ಚುವುದರಿಂದ ಲಕ್ಷಾಂತರ ಕೀಟಗಳು ಸತ್ತು ಹೋಗುವ ಪರಿಣಾಮ ಹಲವಾರು ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗುತ್ತದೆ ಎಂದು ಮಾರ್ಚ್ 3ರಂದು ವನ್ಯಜೀವಿ ದಿನದಿಂದ ಆರಂಭ ಮಾಡಿದ ಸಂಚಾರ 6 ರವರೆಗೆ ಸುತ್ತಿದ ಅಧ್ಯಯನ ತಂಡ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆ.
ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನವು ಕಳೆದ ಬಾರಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ರೀತಿಯ ದುರ್ಘಟನೆಗಳು ನಡೆಯದಂತೆ ಪದಾಧಿಕಾರಿಗಳು ಚರ್ಚೆ ಮಾಡಿದಾಗ ಜಂಟಿಯಾಗಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ವತಿಯಿಂದ ಸ್ಥಳ ಪರಿಶೀಲನೆ ನಡೆಸಲಾಯಿತು ಮತ್ತು ಮುಂದಿನ ದಿನದಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಈ ಪ್ರದೇಶದ ಸುರಕ್ಷಿತ ವ್ಯವಸ್ಥೆಗೆ ತಡೆ ನಿರ್ಮಿಸಲು ಸಂಬAಧಪಟ್ಟ ಇಲಾಖೆಗೆ ತಿಳಿಸಬೇಕೆಂದು ವೀಕ್ಷಣೆಯ ತಂಡ ತೀರ್ಮಾನಿಸಿತು.
ಬೇಸಿಗೆ ಬಂತೆಂದರೆ ಕಾಡಿನ ಬೆಂಕಿ ಪ್ರಮಾಣ ಅಧಿಕವಾಗುತ್ತಾ ಹೋಗುತ್ತದೆ. ಒಣಗಿ ಮಳೆಗೆ ಕಾದು ನಿಂತ ಮುಗಿಲೆತ್ತರದ ಮರಗಳು, ಕುರುಚಲು ಅರಣ್ಯ ಪ್ರದೇಶಗಳು ಬೆಂಕಿಗೆ ಆಹುತಿಯಾಗುತ್ತವೆ. ಅಷ್ಟೇ ಅಲ್ಲ ಅರಣ್ಯವನ್ನು ಉಳಿಸುವ ಪ್ರಾಣಿಗಳಿಂದ ಹಿಡಿದು ಸಣ್ಣ ಸಣ್ಣ ಪ್ರಾಣಿ, ಪಕ್ಷಿಗಳು ಕಾಡಿನ ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತವೆ. ಅದೆಷ್ಟೋ ಸೂಕ್ಷ್ಮ ಜೀವಿಗಳು ಅಳಿದು ಹೋಗುತ್ತವೆ. ಮರ, ಗಿಡಗಳ ಲೆಕ್ಕವೇ ಇಲ್ಲ ಎಲ್ಲವೂ ಸುಟ್ಟು ಹೋಗುತ್ತದೆ. ಇದೀಗ ಅದನ್ನು ತಡೆಯಲು ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನವು ಗುಡ್ಡಗಳನ್ನು ಹಸಿರು ವನವನ್ನಾಗಿ ಮಾಡಲು ಸನ್ನದ್ದವಾಗಿದೆ.
“ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ, ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ” ಎಂಬ ಧ್ಯೇಯದೊಂದಿಗೆ ನಡೆದ ಅಧ್ಯಯನದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್, ಸಂಚಾಲಕರಾದ ಟಿ. ರುದ್ರಮುನಿ, ಜಲ ಜಾಗೃತಿ ಉಪಾಧ್ಯಕ್ಷರಾದ ಕೆ. ಓಂಕಾರಪ್ಪ ಮತ್ತು ನಿರ್ದೇಶಕ ಅಜಯ್ ಕುಮಾರ್ ಮತ್ತು ಪದಾಧಿಕಾರಿಗಳು ಗುಡ್ಡಗಾಡು ಅಲೆದಾಡಿ ಮಾಹಿತಿ ಕಲೆ ಹಾಕಿದರು.
ಸಿದ್ದಾರ್ಥ ಬಡಾವಣೆಯ ಸಮೀಪದ ಈ ಗುಡ್ಡದಲ್ಲಿ ಕರಡಿ ಮತ್ತು ಚಿರತೆಗಳು ವಾಸಿಸುತ್ತಿದ್ದವು. ಸಮೀಪದಲ್ಲಿ ಹುಲಿದೋಣಿ ಸಂಗಮೇಶ್ವರ ದೇಗುಲವಿದೆ. ಒಂದು ಸುತ್ತು ಹಾಕಿದ ತಂಡಕ್ಕೆ ಅಲ್ಲಿ ಬೆಂಕಿ ಹಾಕಿದ್ದು ಮತ್ತು ಕೆಲವು ಪುಂಡ ಯುವಕರು ಮದ್ಯಪಾನ ಮಾಡಿದ ಬಾಟಲ್‌ಗಳು ಸಿಕ್ಕವು. ಕೂಡಲೇ ಅರಣ್ಯಗಳ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.