ಕುಂಭಮೇಳದಲ್ಲಿ ಪ್ರೇತಾತ್ಮಗಳು ಸ್ನಾನ ಮಾಡಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಸಿಸಿಟಿವಿಯಲ್ಲಿ ಈ ದೃಶ್ಯಗಳು ದಾಖಲಾಗಿರುವುದಾಗಿ ಹೇಳಲಾಗುತ್ತಿದೆ.
ಈ ಬಗ್ಗೆ ಸಾಧುಗಳಿಗೆ ಕೇಳಿದಾಗ, ಇದೇ ರೀತಿ ಪ್ರತಿಬಾರಿಯೂ ಆಗುತ್ತದೆ, ಜನರು ಸ್ನಾನ ಮಾಡಿದ ಬಳಿಕ ಪ್ರೇತಾತ್ಮಗಳು ಬಂದು ಸ್ನಾನ ಮಾಡಿ ಹೋಗುವುದು ಸಹಜ ಎಂದು ಹೇಳಿದ್ದಾರೆ ಎಂದೂ ಈ ವಿಡಿಯೋದಲ್ಲಿ ಹೇಳಲಾಗಿದೆ.
ಇದಾಗಲೇ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಇದೇ ವಿಡಿಯೋ ವೈರಲ್ ಆಗುತ್ತಿದೆ. ಕೆಲವರು ತಮ್ಮ ಇನ್ಸ್ಟಾಗ್ರಾಮ್ ಖಾತೆಗಳಲ್ಲಿಯೂ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಕೇಸರಿ ಬಟ್ಟೆ ತೊಟ್ಟ ‘ಆತ್ಮ’ಗಳು ಸ್ನಾನ ಮಾಡುವುದನ್ನು ನೋಡಬಹುದಾಗಿದೆ.
ಆದರೆ ಇದು ಫೇಕ್ ವಿಡಿಯೋ. ಅಸಲಿಗೆ ಇದು, ಬ್ರೆಜಿಲ್‌ನ ಪರಾನಾದ್ದು ಎಂದು ತನಿಖೆಯಿಂದ ತಿಳಿದುಬಂದಿದೆ, ಇದರಲ್ಲಿ ಬೀಚ್‌ನಲ್ಲಿ ಕಂಡುಬರುವ ಜನರು ಜೀವಂತವಾಗಿದ್ದಾರೆ. ವೈರಲ್ ವಿಡಿಯೋವನ್ನು ಮಹಾ ಕುಂಭಮೇಳಕ್ಕೆ ಲಿಂಕ್ ಮಾಡುವ ಸುಳ್ಳು ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ಮಹಾಕುಂಭದಲ್ಲಿ ಸ್ನಾನ ಮಾಡಲು ಸಂತರು ಮತ್ತು ಋಷಿಗಳು ಮಾತ್ರವಲ್ಲ, ದೈವಿಕ ಆತ್ಮಗಳೂ ಬರುತ್ತವೆ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗುತ್ತಿದೆ.