ಚಿತ್ರದುರ್ಗ : ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್-1 ದೈಹಿಕ ಶಿಕ್ಷಕರ ಸಂಘ ಜಿಲ್ಲಾ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸರ್ಕಾರಿ ಪ್ರೌಢಶಾಲೆ ಪಾಲವ್ವನಹಳ್ಳಿಯ ಮಂಜುನಾಥ ಟಿ. ಉಪಾಧ್ಯಕ್ಷರಾಗಿ ಎಮ್.ಎಮ್.ಜಿ.ಜೆ.ಸಿ. ಹೊಳಲ್ಕೆರೆಯ ಸುರೇಶ್ ಆರ್. ಪ್ರಧಾನ ಕಾರ್ಯದರ್ಶಿಯಾಗಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಚಿತ್ರದುರ್ಗದ ಕಲ್ಲೇಶ ಡಿ. ಖಜಾಂಚಿಯಾಗಿ ಸರ್ಕಾರಿ ಪ್ರೌಢಶಾಲೆ ಲಕ್ಷ್ಮಿಸಾಗರದ ಮದನಕುಮಾರ್ ಇ.ಎಲ್. ಜಂಟಿ ಕಾರ್ಯದರ್ಶಿಯಾಗಿ ಸರ್ಕಾರಿ
ಪ್ರೌಢಶಾಲೆ ದೇವಪುರದ ದಿವಾಕರ ಎನ್.ಟಿ. ಸಂಘಟನಾ ಕಾರ್ಯದರ್ಶಿಯಾಗಿ ಸರ್ಕಾರಿ ಪ್ರೌಢಶಾಲೆ ಬೀರೇನಹಳ್ಳಿಯ ಪಾಂಡುರಂಗ ಆರ್. ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿದ್ದ ವಿಷಯ ಪರಿವೀಕ್ಷಕ ಮಹಾಲಿಂಗಪ್ಪ ನೂತನವಾಗಿ ಆಯ್ಕೆಯಾದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.