ಚಿತ್ರದುರ್ಗ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ವತಿಯಿಂದ ಭಾನವಾರ ನಗರದಲ್ಲಿ ನಡೆದ ಸೀರೆ ವಾಕಥಾನ್ನಲ್ಲಿ ನೂರಾರು ಮಹಿಳೆಯರು ವಿಭಿನ್ನ ರೀತಿಯಲ್ಲಿ ಸೀರೆಗಳನ್ನುಟ್ಟು ಸಂಭ್ರಮಿಸಿದರು.
ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಹೊರಟ ಸೀರೆವಾಕಥಾನ್ಗೆ ವಾಸವಿ ಕ್ಲಬ್ ಇಂಟರ್ನ್ಯಾಷನಲ್ ಗೌರ್ವನರ್ ಅಶೋಕ್ ಚಾಲನೆ ನೀಡಿದರು.
ಉಡುಪಿಯಿಂದ ಆಗಮಿಸಿದ್ದ ಮಹಿಳೆಯರ ಚಂಡೆ ಮೃದಂಗ ಸೀರೆವಾಕಥಾನ್ಗೆ ಮೆರಗು ತುಂಬಿತು. ಸೀರೆವಾಕಥಾನ್ನಲ್ಲಿ ಭಾರತ್ಮಾತ ಕೀ ಜೈ ಘೋಷಣೆಗಳು ಮೊಳಗಿದವು.
ಹಸಿರು, ನೀಲಿ, ಕೇಸರಿ, ಕಂದು ವರ್ಣದ ಸೀರೆಗಳನ್ನುಟ್ಟ ಮಹಿಳೆಯರು ಸೀರೆವಾಕಥಾನ್ನಲ್ಲಿ ಹೆಜ್ಜೆ ಹಾಕಿದರು.
ಬಿಸಿಲ ಝಳಕ್ಕೆ ಮಹಿಳೆಯರು ತಲೆಗೆ ಟೋಪಿ ಹಾಗೂ ಕಣ್ಣಿಗೆ ಕೂಲಿಂಗ್ ಗ್ಲಾಸ್ಗಳನ್ನು ಧರಿಸಿದ್ದರು.
ಒನಕೆ ಓಬವ್ವ ಪ್ರತಿಮೆ ಬಳಿ ಸೀರೆ ವಾಕಥಾನ್ ಮುಕ್ತಾಯಗೊಂಡಿತು.
ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ರಾಜೇಶ್ವರಿ ಇನ್ನು ಮುಂತಾದವರು ಸೀರೆವಾಕಥಾನ್ನಲ್ಲಿ ಪಾಲ್ಗೊಂಡಿದ್ದರು.