ಚಿತ್ರದುರ್ಗ: ಸಹಕಾರ ಸಂಘಗಳ ಅಧಿನಿಯಮ, ನಿಯಮ ಹಾಗೂ ಉಪನಿಯಮಗಳಂತೆ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಲಾಗಿದ್ದು, ಸಂಘಗಳ ನೋಂದಣಿ ರದ್ಧತಿಗೆ ಕ್ರಮವಹಿಸಲಾಗಿದೆ.
ನೋಂದಣಿ ರದ್ಧತಿಗೆ ಸದಸ್ಯರಿಂದ ಹಾಗೂ ಸಾರ್ವಜನಿಕರಿಂದ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಈ ಪ್ರಕಟಣೆಯ ಹತ್ತು ದಿನಗಳೊಳಗಾಗಿ ಚಿತ್ರದುರ್ಗ ನಗರದ ಬಿ.ಎಲ್.ಗೌಡ ಲೇ ಔಟ್‍ನ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಗೆ ಸಲ್ಲಿಸಲು ತಿಳಿಸಿದೆ.
ಚಿತ್ರದುರ್ಗ ತಾಲ್ಲೂಕಿನ ಬಂಗಾರಹಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ, ಹೊಸದುರ್ಗ ತಾಲ್ಲೂಕಿನ ಬೀಸನಹಳ್ಳಿ, ಬೆಲಗೂರು, ಕಂಚಿಪುರ, ಹೊಳಲ್ಕೆರೆ ತಾಲ್ಲೂಕಿನ ಚಿಕ್ಕ ಎಮ್ಮಿಗನೂರು, ಚಳ್ಳಕೆರೆ ತಾಲ್ಲೂಕಿನ ಗಜ್ಜಿಗಾನಹಳ್ಳಿ, ಮೀರಸಾಬಿಹಳ್ಳಿ, ದೊಣ್ಣೆಹಳ್ಳಿ, ಪಾತಪ್ಪನಗುಡಿ, ಮನ್ನೆಕೋಟೆ, ಮತ್ಸಮುದ್ರ, ಗೊರ್ಲತ್ತು, ಕುರುಡಿಹಳ್ಳಿ, ಹುಳ್ಳಿಕಟ್ಟೆ, ಬೊಮ್ಮನಕುಂಟೆ, ಹಿರೇಹಳ್ಳಿ, ಗುಡಿಹಳ್ಳಿ, ಬೊಂಬೇರಹಳ್ಳಿ ಹಾಗೂ ಓಬಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಲಾಗಿದ್ದು, ಈ ಸಂಘಗಳ ನೊಂದಣಿ ರದ್ಧತಿಗೆ ಕ್ರಮವಹಿಸಲಾಗುವುದು ಎಂದು ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.