ನವದೆಹಲಿ : ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅನೇಕರ ಕನಸು, ಆದರೆ ಕೆಲವರು ಮಾತ್ರ ನನಸಾಗಿಸಿಕೊಳ್ಳುತ್ತಾರೆ. ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಬುದ್ಧಿವಂತಿಕೆ, ಮಾನಸಿಕ ಶಕ್ತಿ ಮತ್ತು ವರ್ಷಗಳ ಪರಿಶ್ರಮ ಬೇಕಾಗುತ್ತದೆ. ಹೀಗೆ ಯುಪಿಎಸ್ಸಿ ಪರೀಕ್ಷೆಗಾಗಿ ದಿನಕ್ಕೆ 17-18 ಗಂಟೆಗಳ ಕಾಲ ಅಧ್ಯಯನ ಮಾಡಿ ಉತ್ತೀರ್ಣರಾದ ಪ್ರಿಯಾಂಕಾ ಗೋಯಲ್ ಅವರ ಸ್ಫೂರ್ತಿದಾಯಕ ಕತೆ ಇದು.
ಪ್ರಿಯಾಂಕಾ ಗೋಯಲ್ ಅವರ ತಂದೆ ಉದ್ಯಮಿ ಮತ್ತು ತಾಯಿ ಗೃಹಿಣಿ. ಅವರು ದೆಹಲಿ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾದ ಕೇಶವ ಮಹಾವಿದ್ಯಾಲಯ (ಕೆಎಂವಿ) ದಿಂದ ವಾಣಿಜ್ಯ ಪದವಿಯನ್ನು ಪಡೆದರು. ಹಾಗೂ ದೆಹಲಿಯ ಮಹಾರಾಜ ಅಗ್ರಸೇನ್ ಮಾದರಿ ಶಾಲೆಯಲ್ಲಿ ತಮ್ಮ ಇಂಟರ್ಮೀಡಿಯೇಟ್ ಅನ್ನು ಪೂರ್ಣಗೊಳಿಸುತ್ತಾರೆ.
2016 ರಲ್ಲಿ, ಪ್ರಿಯಾಂಕಾ ಅವರು ಯುಪಿಎಸ್ಸಿ ಸಿಎಸ್ಇಗೆ ತಯಾರಿ ಪ್ರಾರಂಭಿಸಿದರು.ಆದಾಗ್ಯೂ, ಅವರು ಕೇವಲ 0.3 ಅಂಕಗಳ ಅಂತರದಿಂದ ಸ್ಥಾನ ಪಡೆಯಲು ವಿಫಲರಾದರು. ಆದರೆ ಅವರು ತಮ್ಮ ಹಿನ್ನಡೆಯಿಂದ ವಿಚಲಿತರಾಗದೆ, ಆರನೇ ಬಾರಿಗೆ 2022 ರಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾದರು.
ಪ್ರಿಯಾಂಕಾ ಗೋಯಲ್ ದಿನಕ್ಕೆ 17-18 ಗಂಟೆಗಳ ಕಾಲ ಅವಿರತವಾಗಿ ಅಧ್ಯಯನ ಮಾಡುತ್ತಿದ್ದರು. ಈ ಅಧ್ಯಯನದ ಘಲವಾಗಿ ಪ್ರಿಯಾಂಕಾ ಅವರು ಅಖಿಲ ಭಾರತ 369 ನೇ ರ್ಯಾಂಕ್ ಗಳಿಸಿದರು. ಪರೀಕ್ಷೆಯಲ್ಲಿನ ಅವರ ಪ್ರಭಾವಶಾಲಿ ಶ್ರೇಯಾಂಕವು ಅವರಿಗೆ DANICS (ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಮನ್ ಮತ್ತು ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿ) ಕೇಡರ್ನಲ್ಲಿ ಸ್ಥಾನವನ್ನು ಗಳಿಸಿಕೊಟ್ಟಿತು.