ಚಿಕನ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅನೇಕ ಮಂದಿಗೆ ಚಿಕನ್ ಫೇವರೆಟ್ ಫುಡ್. ಹಾಗಾಗಿ ವಾರದಲ್ಲಿ ಅನೇಕ ಮಂದಿ ಸಾಕಷ್ಟು ಬಾರಿ ಕೋಳಿ ಮಾಂಸ ತಿನ್ನುತ್ತಾರೆ.
ಅಧ್ಯಯನವೊಂದರ ವರದಿಯ ಪ್ರಕಾರ, ಪ್ರತಿಯೊಬ್ಬರೂ ತಮ್ಮ ರಕ್ತದ ಪ್ರಕಾರಕ್ಕೆ ಅನುಗುಣವಾಗಿ ಆಹಾರವನ್ನು ನಿರ್ಧರಿಸಬೇಕು. ರಕ್ತದ ಗುಂಪಿನ ಆಧಾರದ ಮೇಲೆ ನಾವು ಸೇವಿಸುವ ಆಹಾರವು ದೇಹದಿಂದ ವೇಗವಾಗಿ ಜೀರ್ಣವಾಗುತ್ತದೆ. ಕೋಳಿಗೂ ಈ ಮಾತು ಅನ್ವಯಿಸುತ್ತದೆ. ಸಾಮಾನ್ಯವಾಗಿ ಚಿಕನ್ ಹಾಗೂ ಮಟನ್ ಎರಡನ್ನೂ ಕೂಡ ಎಲ್ಲರೂ ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
A ಬ್ಲಡ್ ಗ್ರೂಪಿನವರು ಹೆಚ್ಚು ಸೂಕ್ಷ್ಮವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುತ್ತಾರೆ. ಆದ್ದರಿಂದ ಇವರು ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಂತಹವರು ಮಾಂಸಾಹಾರವನ್ನು ಸೇವಿಸುವಾಗ ಹೆಚ್ಚು ಜಾಗರೂಕರಾಗಿರಬೇಕು.ಇವರ ದೇಹವು ಮಾಂಸವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುವುದಿಲ್ಲ, ಆದ್ದರಿಂದ ಇವರು ಚಿಕನ್ ಮತ್ತು ಮಟನ್ ಅನ್ನು ಕಡಿಮೆ ತಿನ್ನಬೇಕು.
ಇವುಗಳ ಬದಲಿಗೆ ಹಸಿರು ತರಕಾರಿಗಳು, ಸಮುದ್ರಾಹಾರ ಮತ್ತು ವಿವಿಧ ರೀತಿಯ ಬೇಳೆಕಾಳುಗಳನ್ನು ಒಳಗೊಂಡಿರುವ ಆಹಾರಗಳನ್ನು ಸೇವಿಸಬೇಕು.
B ಬ್ಲಡ್ ಗ್ರೂಪ್ನವರು ಮಾಂಸಹಾರ ವಿಚಾರಕ್ಕೆ ಬಂದರೆ ಅದೃಷ್ಟವಂತರು. ಈ ರಕ್ತದ ಗುಂಪಿಗೆ ಸೇರಿದವರು ಹೆಚ್ಚು ಜಾಗರೂಕರಾಗಿರಬೇಕಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಬಿ ಬ್ಲಡ್ ಗ್ರೂಪಿನವರು ಹಸಿರು ಎಲೆಗಳ ತರಕಾರಿಗಳು, ಹಣ್ಣುಗಳು, ಮೀನು, ಮಟನ್ ಮತ್ತು ಚಿಕನ್ ತಿನ್ನಬಹುದು. ಅಂದರೆ ಎಬಿ ಮತ್ತು ಒ ಬ್ಲಡ್ ಗ್ರೂಪಿನವರು ಸಮತೋಲನವಾಗಿ ಚಿಕನ್ ಮತ್ತು ಮಟನ್ ಸೇವಿಸಬೇಕು. ಏಕೆಂದರೆ ಯಾವುದೇ ರೀತಿಯ ಆಹಾರವಾದರೂ ಅತಿಯಾಗಿ ತಿನ್ನುವುದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು.