ಜಗತ್ತಿನಲ್ಲಿ ಕಾಲ ಕಳೆದಂತೆ ಎಲ್ಲವೂ ಬದಲಾಗುತ್ತಿರುತ್ತದೆ. ಮಾರುಕಟ್ಟೆಯಲ್ಲಿ ಸದ್ದು ಮಾಡುವ ಶೂಗಳು ಪುರುಷರಿಗೆ ಹೊಸ ಲುಕ್ ನೀಡುತ್ತದೆ. ಆದರೆ ನೀವು ಧರಿಸುವ ಉಡುಗೆ ಯಾವ ರೀತಿಯದ್ದು ಎನ್ನುವುದರ ಮೇಲೆ ಶೂ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ.
ನೀವೇನಾದರೂ ಆಫೀಸಿಗೆ ಫಾರ್ಮಲ್ ಉಡುಗೆ ಧರಿಸುತ್ತಿದ್ದರೆ ಆಗ ಸ್ಟೈಲಿಶ್ ಶೂಗಳನ್ನು ಹಾಕಬೇಡಿ. ಈ ಫಾರ್ಮಲ್ಸ್ ಬಟ್ಟೆ ತೊಟ್ಟರೆ ಫಾರ್ಮಲ್ ಶೂ ಧರಿಸುವುದು ಸೂಕ್ತ. ಇಲ್ಲದಿದ್ದರೆ ಈ ಬಟ್ಟೆಯ ಲುಕ್ ಬದಲಾಗುತ್ತದೆ. ಈ ಫಾರ್ಮಲ್ಸ್ ಉಡುಗೆಗೆ ಕಪ್ಪು ಹಾಗೂ ಕಂದು ಬಣ್ಣದ ಶೂಗಳನ್ನೇ ಆಯ್ಕೆ ಮಾಡಿಕೊಂಡರೆ ಇನ್ನು ಉತ್ತಮ.
* ಹೆಚ್ಚಿನವರು ಎಲ್ಲಾ ಕಪ್ಪು ಬಣ್ಣದ ಶೂಗಳನ್ನೆ ಹೆಚ್ಚು ಇಷ್ಟ ಪಡುತ್ತಾರೆ. ಯಾವುದೇ ರೀತಿಯ ಉಡುಗೆ ಧರಿಸಿದರೂ ಈ ಕಪ್ಪು ಬಣ್ಣದ ಶೂಗಳು ಹೊಂದಿಕೆಯಾಗುತ್ತದೆ. ಈ ಫಾರ್ಮಲ್ ಉಡುಗೆಗಳಿಗೆ ಈ ಕಪ್ಪು ಬಣ್ಣದ ಶೂ ಉತ್ತಮ ಮ್ಯಾಚ್ ಆಗಿದೆ.
* ಇತ್ತೀಚೆಗಿನ ದಿನಗಳಲ್ಲಿ ಕಪ್ಪು ಬಣ್ಣದ ಶೂ ಜೊತೆಗೆ ಕಂದು ಬಣ್ಣದ ಶೂಗಳನ್ನು ಹೆಚ್ಚು ಖರೀದಿಸುತ್ತಾರೆ. ಈ ಶೂ ನಿಜಕ್ಕೂ ಸ್ಟೈಲಿಶ್ ಲುಕ್ ನೀಡುತ್ತದೆ. ಜೀನ್ಸ್ ಪ್ಯಾಂಟ್, ಫಾರ್ಮಲ್ಸ್ ಪ್ಯಾಂಟ್ ಧರಿಸುವಿರಿಯಾದರೆ ಕಂದು ಬಣ್ಣದ ಶೂ ಮ್ಯಾಚ್ ಆಗುತ್ತದೆ. ಇದರಲ್ಲಿ ನೀವು ಸ್ಟೈಲಿಶ್ ಆಗಿಯೂ ಕಾಣುತ್ತೀರಿ.
* ಜೀನ್ಸ್ ಪ್ಯಾಂಟ್ ಗೆ ಸ್ಟೈಲಿಶ್ ಶೂ ಧರಿಸಿದರೇನೇ ಚಂದ. ಜೀನ್ಸ್ ಪ್ಯಾಂಟ್ ಗೆ ಲೇಸ್ ಇಲ್ಲದ ಶೂಗಳು, ಲೋಫರ್ಸ್ ಶೂಗಳು ಬೆಸ್ಟ್ ಆಯ್ಕೆಯಾಗಿದ್ದು, ಇದು ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಆದರೆ ಇದೀಗ ಈ ಡ್ರೆಸ್ ಗೂ ಕಂದು ಬಣ್ಣದ ಶೂಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
* ಇತ್ತೀಚೆಗಿನ ದಿನಗಳಲ್ಲಿ ಕಪ್ಪು, ಬೂದು ಹಾಗೂ ಬಿಳಿ ಬಣ್ಣದ ಶೂಗಳಷ್ಟೆ ಅಲ್ಲ, ಡಾರ್ಕ್ ಹಾಗೂ ಮಲ್ಟಿ ಕಲರ್ ಶೂಗಳು ಟ್ರೆಂಡಿಂಗ್ ನಲ್ಲಿದೆ. ಪಾರ್ಟಿಗೆ ಹೋಗುತ್ತಿದ್ದರೆ ಈ ರೀತಿಯ ಶೂಗಳನ್ನೆ ಆಯ್ಕೆ ಮಾಡಿ. ಇದು ದೂರದಿಂದಲೇ ಎಲ್ಲರನ್ನು ಆಕರ್ಷಿಸುತ್ತವೆ. ಸಣ್ಣ ಮಕ್ಕಳಿಂದ ಹಿಡಿದು ಯುವಕರಿಗೆ ಈ ಶೂಗಳು ಹೊಸ ಲುಕ್ ನೀಡುವುದಲ್ಲದೆ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು.