ವಾಕಿಂಗ್ ಹೋಗೋಕೆ ಚೆಂದದ ಹುಡುಗಿ ಬೇಕು ಎಂಬ ಜಾಹೀರಾತೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದರ ಸತ್ಯಾಸತ್ಯತ ಬಗ್ಗೆ ಖಚಿತತೆ ಇಲ್ಲ.
https://www.instagram.com/reel/DGAuplTxtgj/?igsh=MXV2Y3hudHppNnR5cg==
ಜಾಹೀರಾತಿನಲ್ಲಿರೋದೇನು? ಮುಂಜಾನೆ ವಾಯುವಿಹಾರಕ್ಕೆ ಹೋಗಲು ಸುಂದರವಾದ ಹುಡುಗಿ ಬೇಕು. ಬಿಹೆಚ್‌ಯು ಸಮೀಪ, ಕೇವಲ ಒಂದು ಗಂಟೆ, ಸ್ಯಾಲರಿ 6 ರಿಂದ 10 ಸಾವಿರ ರೂಪಾಯಿ ಎಂದು ಬರೆದು ದೂರವಾಣಿ ಸಂಖ್ಯೆಯನ್ನು ಹಾಕಲಾಗಿದೆ.
kalyug gram ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ಜಾಹೀರಾತಿನ ಫೋಟೋ ಪೋಸ್ಟ್ ಮಾಡಲಾಗಿದ್ದು, ‘ಇತನ ಅಕೆಲಾ ಬಂದ ಆಜ್ ತಕ್ ನಹೀ ದೇಖ’ ಎಂದು ಬರೆದಿದ್ದಾರೆ. ಅಂದರೆ ನಾನು ಇಷ್ಟೊಂದು ಒಂಟಿತನ ಅನುಭವಿಸುತ್ತಿರುವ ವ್ಯಕ್ತಿಯನ್ನು ಯಾವತ್ತೂ ನೋಡಿಲ್ಲ ಎಂದು ಅವರು ಬರೆದಿದ್ದಾರೆ. ಇನ್ನೂ ಈ ಪೋಸ್ಟ್ ನೋಡಿದ ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ