ಚಿತ್ರದುರ್ಗ: ಅಪ್ರಾಪ್ತ ಬಾಲಕರ ವಾಹನ ಚಾಲನೆಯ ವಿರುದ್ಧ ಕಠಿಣ ಕ್ರಮಕೋರುವ ಬಗ್ಗೆ ಹಾಗೂ ಕಳೆದ ಎರಡು ದಿನಗಳಲ್ಲಿ ರಸ್ತೆ ಅಪಘಾತದಲ್ಲಿ ತೀರಿದ ಮಕ್ಕಳ ಸಾವಿಗೆ ಟ್ರಾಫಿಕ್ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಕಾರಣರನ್ನಾಗಿ ಪರಿಗಣಿಸಿ, ಈ ಅಧಿಕಾರಿಗಳಿಂದಲೇ ಆ ಮಕ್ಕಳ ಪೋಷಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಟಾರ್ಗೆಟ್ ಯುವ ವೇದಿಕೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಚಿತ್ರದುರ್ಗದಲ್ಲಿ ಕಳೆದ ವರ್ಷದಿಂದ ಸುಮಾರು 50ಕ್ಕೂ ಅಧಿಕ ಅಪಘಾತಗಳು ಸಂಭವಿಸಿದ್ದು ಅವುಗಳಲ್ಲಿ ಮಕ್ಕಳು ಅತ್ಯಧಿಕವಾಗಿ ಸಾವನ್ನಪ್ಪಿದ್ದಾರೆ ಹಾಗೂ ಅಂಗ ವೈಫಲ್ಯತೆಯನ್ನು ಹೊಂದುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ಅವು ಬುದ್ಧರಾದ ಮಕ್ಕಳು ವಾಹನಗಳನ್ನು ಅತ್ಯಧಿಕ ವೇಗವಾಗಿ ಚಲಾಯಿಸುತ್ತಾರೆ ಜೊತೆಗೆ ಹೆಚ್ಚಿನ ಸಿ.ಸಿ ಹೊಂದಿರುವ ದ್ವಿ -ಚಕ್ರದ ವಾಹನಗಳ ನಿಯಂತ್ರಣ ಇವರಿಂದ ಅಸಾಧ್ಯವಾದಾಗ ಇಂತಹ ಅಪಘಾತಗಳು ಹೆಚ್ಚಾಗುತ್ತವೆ.
ಹಾಗಾಗಿ ಪ್ರತೀ ಶಾಲಾ ಕಾಲೇಜುಗಳಲ್ಲಿ ತಪಸಣಿಯನ್ನು ನಡೆಸುವ ಮೂಲಕ ಹಾಗೂ ರಸ್ತೆಗಳು ಹಾಗೂ ಇನ್ನಿತರ ಬಡಾವಣೆಗಳ ಮುಖ್ಯ ರಸ್ತೆಗಳಲ್ಲಿ ಹೆಚ್ಚಿನ ಸಂಚಾರಿ ಪೊಲೀಸರನ್ನು ನೇಮಿಸಿ ಬಾಲಕರು ಚಲಾಯಿಸುತ್ತಿರುವಂತಹ ವಾಹನಗಳನ್ನು ಜಪ್ತಿ ಮಾಡಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ಮುಂದೆ ಆಗಬಹುದಾದ ಅಪಘಾತಡೆಯಬೇಕಾಗಿ ತಮ್ಮಲ್ಲಿ ಪ್ರಾರ್ಥಿಸುತ್ತೇವೆ