ಬೆಂಗಳೂರು :ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ಬಿಗ್ ಬಾಸ್ ಖ್ಯಾತಿಯ ರಜತ್ ಮತ್ತು ವಿನಯ್ರನ್ನು ಮತ್ತೆ ಬಸವೇಶ್ವರ ನಗರದ ಪೊಲೀಸರು ಬಂಧಿಸಿದ್ದಾರೆ.
ಈ ಮಧ್ಯೆ ವಿಡಿಯೋ ಮೂಲಕ ರಜತ್ ಸ್ಪಷ್ಟನೆ ನೀಡಿದ್ದಾರೆ. ಜನ ಕೆಟ್ಟದ್ದು ಕಲಿಯಲಿ ಎಂದು ರೀಲ್ಸ್ ಮಾಡಿಲ್ಲ ಎಂದು ರಜತ್ ಸ್ಪಷ್ಟನೆ ನೀಡಿದ್ದಾರೆ.
ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಯ್ ಮತ್ತು ರಜತ್ರನ್ನು ನಿನ್ನೆ (ಮಾ.24) ಬಂಧಿಸಿದ್ದರು. ಆ ನಂತರ ಮಧ್ಯಾರಾತ್ರಿ ಅವರನ್ನು ಬಿಡುಗಡೆ ಮಾಡಿದ್ದರು. ಇಂದು ಮತ್ತೆ ವಿಚಾರಣೆಗೆ ಬಂದ ವೇಳೆ ರಜತ್ ಮತ್ತು ವಿನಯ್ರನ್ನು ಬಂಧಿಸಿದ್ದಾರೆ. ಠಾಣೆಗೆ ಬರುವ ಮುಂಚೆಯೇ ವಿಡಿಯೋ ಮೂಲಕ ರಜತ್ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
ನಮಸ್ಕಾರ, ನಾನು ಮತ್ತು ವಿನಯ್ ರೀಲ್ಸ್ ಮಾಡಿದ್ವಿ. ನಟರಾಗಿ ಆ ರೀಲ್ಸ್ ಮಾಡಿದ್ವಿ ಹೊರತು ಅದರಿಂದ ಜನ ಕೆಟ್ಟದ್ದು ಕಲಿಯಲಿ ಎಂಬ ಉದ್ದೇಶದಿಂದ ಮಾಡಿಲ್ಲ ಎಂದು ವಿಡಿಯೋ ಮೂಲಕ ರಜತ್ ಸ್ಪಷ್ಟನೆ ನೀಡಿದ್ದಾರೆ.