ತುಮಕೂರು : ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ದಳು. ಅಲ್ಲದೇ, ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿದ್ದು, ಒಬ್ಬನೇ ಹುಡುಗ ಎರಡು ಬಾರಿಯೂ ಬಂದಿದ್ದನು.
ಆದರೆ, ಎರಡು ಬಾರಿಯೂ ಬೇರೆ ಬೇರೆ ಹುಡುಗಿಯರಿದ್ದರು ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಕೆ.ಎನ್.ರಾಜಣ್ಣ, ನಿರಂತರ ಕಾರ್ಯಕ್ರಮವಿದ್ದ ಕಾರಣ ಇಷ್ಟು ದಿನ ದೂರು ಕೊಡಲು ಆಗಿರಲಿಲ್ಲ. ನಾನೇ ಇಂದು ಕುಳಿತು ದೂರು ಸಿದ್ದಪಡಿಸಿದ್ದೇನೆ.
ಪರಮೇಶ್ವರ್ ಅವರನ್ನು ಹುಡಕಿಕೊಂಡು ಹೋಗಿ ದೂರು ಕೊಡ್ತೀನಿ ಎಂದಿದ್ದಾರೆ. ಬೆಂಗಳೂರಿನ ಮನೆಯಲ್ಲಿ ಸಿಸಿಟಿವಿ ಇರಲಿಲ್ಲ. ಹಾಗಾಗಿ ಸಿಸಿಟಿವಿ ವೀಡಿಯೋ ಇಲ್ಲ. ಹೀಗಾಗಿ ಯಾರು ಬಂದು ಹೋಗಿರ್ತಾರೆ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿರುವುದಾಗಿ ರಾಜಣ್ಣ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಎರಡು ಸಲ ಒಬ್ಬನೇ ಹುಡುಗ ಇದ್ದ.
ಆದರೆ ಬೇರೆ ಹುಡುಗಿಯರಿದ್ದರು. ಮೊದಲ ಬಾರಿಗೆ ಅವರು ಹೈಕೋರ್ಟ್ ಲಾಯರ್ ಎಂದು ಹೇಳಿಕೊಂಡು ಬಂದಿದ್ದರು. ಎರಡನೇ ಬಾರಿಯೂ ಲಾಯರ್ ಎಂದು ಪರಿಚಯ ಮಾಡಿಕೊಂಡಿದ್ದರು. ಅವರ ಪೋಟೋ ನೋಡಿದರೂ ಗುರುತು ಹಿಡಿಯಬಲ್ಲೆ ಎಂದು ಸಚಿವ ರಾಜಣ್ಣ ಹೇಳಿದ್ದಾರೆ