ಥೈಲೆಂಡ್ : ಪ್ರವಾಸಕ್ಕೆಂದು ಥೈಲೆಂಡ್ಗೆ ತೆರಳಿದ್ದ ಮಹಾರಾಷ್ಟ್ರ ಸತಾರಾದ ಇಬ್ಬರು ಯುವಕರು ಜರ್ಮನ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಸಿಕ್ಕಿಬಿದ್ದಿದ್ದಾರೆ.
ಮಹಾರಾಷ್ಟ್ರದ ಇಬ್ಬರು ಯುವಕರು ಪ್ರವಾಸಕ್ಕೆಂದು ಥೈಲೆಂಡ್ಗೆ ಹೋಗಿದ್ದರು. ಸೂರತ್ ಥಾನಿ ಪ್ರಾಂತ್ಯದ ರಿನ್ ಬೀಚ್ಗೆ ಹೋಗಿದ್ದರು. ಈ ವೇಳೆ ಇಬ್ಬರೂ ಜರ್ಮನ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವುದಾಗಿ ವರದಿಯಾಗಿದೆ.
ಬಳಿಕ ಸಂತ್ರಸ್ತೆ ಕೊಹ್ ಫಂಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಗಳು ಮತ್ತು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸಂದ್ಯ ಬಂಧಿತರಿಬ್ಬರು ಜೈಲಿನಲ್ಲಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅತ್ಯಾಚಾರವೆಸಗಿರುವುದಾಗಿ ಆರೋಪಿ ವಿಜಯ್ ದಾದಾಸಾಹೇಬ್ ಒಪ್ಪಿಕೊಂಡಿದ್ದರೆ, ಮತ್ತೋರ್ವ ಆರೋಪಿ ರಾಹುಲ್ ಬಾಳಾಸಾಹೇಬ್ ನಿರಾಕರಿಸಿದ್ದಾನೆ.
ಈ ಘಟನೆ ಮಾ. 14 ರಂದು ಬೆಳಗಿನ ಜಾವ 4.50 ಕ್ಕೆ ಹಾದ್ ರಿನ್ ಬೀಚ್ನಲ್ಲಿ ನಡೆದಿದೆ. ಘಟನೆಯ ವೇಳೆ ತಾನು ಕುಡಿದ ಮತ್ತಿನಲ್ಲಿದ್ದ ಕಾರಣ ಆರೋಪಿಯ ಗುರುತು ಖಚಿತವಿಲ್ಲ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದರು. ಬಳಿಕ ಪೊಲೀಸರ ತನಿಖೆ ವೇಳೆ ಇವರಿಬ್ಬರು ಪತ್ತೆಯಾಗಿದ್ದಾರೆ ಎನ್ನಲಾಗಿದೆ.