ಮುಂಬೈ :ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಶುರುವಾಗಿ 5 ಪಂದ್ಯಗಳು ಮುಗಿದರು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಚರ್ಚೆಗಳು ಮುಂದುವರೆದಿದೆ. ಇದೀಗ ಈ ಚರ್ಚೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ವಿರೋಧಿಸಿದ್ದಾರೆ.
ಜಿಯೋಸ್ಟಾರ್ ಜೊತೆ ಈ ಬಗ್ಗೆ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ಐಪಿಎಲ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಗತ್ಯವಿಲ್ಲ ಎಂಬುದು ನನ್ನ ಭಾವನೆ. ಏಕೆಂದರೆ ಆಟಗಾರನು ಇಡೀ ಪಂದ್ಯದಲ್ಲಿ ಭಾಗಿಯಾಗಬೇಕು. ಆದರೆ ಹೊಸ ನಿಯಮವು ಇಡೀ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಗೆ ಬಂದಾಗಲೇ ನನಗೆ ಈ ನಿಯಮದ ಅಗತ್ಯವೇ ಇಲ್ಲ ಎಂದು ಅನಿಸಿತ್ತು. ಒಂದು ರೀತಿಯಲ್ಲಿ, ಇಂತಹ ನಿಯಮ ನನ್ನಂತಹ ಹಿರಿಯ ಆಟಗಾರರಿಗೆ ಸಹಾಯ ಮಾಡುತ್ತದೆ. ಆದರೆ ನಾನು ವಿಕೆಟ್ ಕೀಪರ್. ಹೀಗಾಗಿ ನಾನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಲು ಆಗುವುದಿಲ್ಲ.
ನಾನು ಇಡೀ ಪಂದ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಬಯಸುವ ಆಟಗಾರ. ಆದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯುವ ಆಟಗಾರ ಒಂದಾದರೆ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾತ್ರ ಮಾಡುತ್ತಾರೆ. ಇದರಿಂದಾಗಿಯೇ ಈಗ ಹೆಚ್ಚಿನ ಪಂದ್ಯಗಳಲ್ಲಿ ಬೃಹತ್ ಸ್ಕೋರ್ ಮೂಡಿ ಬರುತ್ತಿದೆ ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.
 
				 
         
         
         
															 
                     
                     
                     
                     
                    


































 
    
    
        