ನವದೆಹಲಿ: ಓಲಾ ಮತ್ತು ಊಬರ್ ರೀತಿ ಸಹಕಾರಿ ಟ್ಯಾಕ್ಸಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸಂಸತ್ತನಲ್ಲಿ ಮಾತನಾಡಿದ ಅವರು, ಈ ಸಹಕಾರಿ ಟ್ಯಾಕ್ಸಿ ವೇದಿಕೆಯಿಂದ ಬರುವ ಲಾಭವು ಯಾವುದೇ ಶ್ರೀಮಂತ ವ್ಯಕ್ತಿಗೆ ಹೋಗುವುದಿಲ್ಲ. ಈ ಲಾಭ ನೇರವಾಗಿ ಟ್ಯಾಕ್ಸಿ ಚಾಲಕನಿಗೆ ಹೋಗುತ್ತದೆ ಎಂದು ತಿಳಿಸಿದರು.
ಜೊತೆಗೆ ಸಹಕಾರಿ ವಿಮಾ ಕಂಪನಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಗುಜರಾತ್‌ನಲ್ಲಿ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಗುಜರಾತ್ ಸರ್ಕಾರ ಇದಕ್ಕಾಗಿ ನಮಗೆ ಭೂಮಿ ನೀಡಿದೆ. ಗುಜರಾತ್‌ನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತಿದ್ದರೂ, ಅದರ ಕಾರ್ಯಕ್ಷೇತ್ರ ದೇಶ್ಯಾದ್ಯಂತ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
 
				 
         
         
         
															 
                     
                     
                     
                    


































 
    
    
        