ಸ್ವಂತ ಉದ್ಯಮ ಆರಂಭಿಸಿ ಊರಿನಲ್ಲೇ ಉತ್ತಮ ಜೀವನೋಪಾಯ ಒದಗಿಸಿಕೊಳ್ಳುವ ಆಸೆ ಇರುತ್ತದೆ. ಆದರೆ, ದೊಡ್ಡ ಪ್ರಮಾಣದ ಬಂಡವಾಳದ ಕೊರತೆ ಈ ಕನಸನ್ನು ಸಾಕಾರಗೊಳಿಸುವುದಕ್ಕೆ ಅಡ್ಡಿಯಾಗಬಹುದು. ಈ ಸಮಸ್ಯೆಗೆ ಪರಿಹಾರವಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMEGP Loan) ಅನ್ನು ಜಾರಿಗೆ ತಂದಿದೆ
PMEGP Scheme: ಈ ಯೋಜನೆಯಡಿ ₹5 ಲಕ್ಷದಿಂದ ₹50 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ.
ಉತ್ಪಾದನಾ ವಲಯದ ಉದ್ಯಮಗಳಿಗೆ – ₹50 ಲಕ್ಷವರೆಗೆ
ಸೇವಾ ವಲಯದ ಉದ್ಯಮಗಳಿಗೆ – ₹50 ಲಕ್ಷವರೆಗೆ
ಸಬ್ಸಿಡಿ
ಗ್ರಾಮೀಣ ಪ್ರದೇಶ: ಶೇ.35% ಸಬ್ಸಿಡಿ
ನಗರ ಪ್ರದೇಶ: ಶೇ.25% ಸಬ್ಸಿಡಿ
ಅರ್ಹತಾ ಮಾಪದಂಡಗಳು
ಕನಿಷ್ಠ 18 ವರ್ಷ ವಯಸ್ಸು
ಕನಿಷ್ಠ 8ನೇ ತರಗತಿ ಪಾಸ್
10 ಲಕ್ಷದವರೆಗೆ ಖಾತರಿಯ ಅಗತ್ಯವಿಲ್ಲ
ಅಗತ್ಯ ದಾಖಲೆಗಳು
ಜಾತಿ ಪ್ರಮಾಣಪತ್ರ
ಗ್ರಾಮೀಣ ಪ್ರದೇಶದ ಪ್ರಮಾಣಪತ್ರ
ಯೋಜನಾ ವರದಿ
ಶೈಕ್ಷಣಿಕ ದಾಖಲೆಗಳು
ಕೌಶಲ ಅಭಿವೃದ್ಧಿ ತರಬೇತಿ ಪ್ರಮಾಣಪತ್ರ
ಕೇಂದ್ರ ಸರ್ಕಾರ 2021-22 ರಿಂದ 2025-26ರ ಅವಧಿಗೆ ₹13,554 ಕೋಟಿ ಅನುದಾನ ಮಂಜೂರು ಮಾಡಿದೆ. ಸರಿಯಾದ ಯೋಜನೆಯೊಂದಿಗೆ ಈ ಸಾಲ ಪಡೆದು ನಿಮ್ಮ ಸ್ವಂತ ಉದ್ಯಮವನ್ನು ಆರಂಭಿಸಬಹುದು.
https://www.kannadanewsnow.in/ayushman-yojana-not-coverd-treatments//