ಅಡುಗೆಗೆ ನಾವು ಸಾಮಾನ್ಯವಾಗಿ ಅನೇಕ ರೀತಿಯ ಸೊಪ್ಪುಗಳನ್ನು ಬಳಸುತ್ತೇವೆ. ಸಾಂಬಾರ ಪದಾರ್ಥಗಳನ್ನು ಉಪಯೋಗಿಸುತ್ತೇವೆ. ಅದರಲ್ಲಿ ಕೊತ್ತಂಬರಿ ಬೀಜ ಅಥವಾ ಸೊಪ್ಪು ಕೂಡಾ ಒಂದು. ಯಾವುದೇ ಪದಾರ್ಥಕ್ಕೆ ಮಸಾಲ ತಯಾರಿಸುವಾಗ ಇದನ್ನು ಸೇರಿಸಲೇಬೇಕಾಗುತ್ತದೆ. ಇದರಿಂದ ಅಡುಗೆಯ ರುಚಿ ಕೂಡಾ ಹೆಚ್ಚುತ್ತದೆ. ಕೊತ್ತಂಬರಿ ಬೀಜದ ಜೊತೆಗೆ ಕೊತ್ತಂಬರಿ ಸೊಪ್ಪಿಗೆ ಕೂಡಾ ಅಡುಗೆಯಲ್ಲಿ ತನ್ನದೇ ಆದ ಪ್ರಾಧಾನ್ಯತೆಯಿದೆ.
ಮಾಂಸಾಹಾರ ಪದಾರ್ಥಗಳಿಗಂತೂ ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸದಿದ್ದರೆ ಅಡುಗೆ ಇನ್ ಕಂಪ್ಲೀಟ್ ಅಂತಾನೇ ಹೇಳ್ಬಹುದು. ಕೊತ್ತಂಬರಿ ಸೊಪ್ಪಿನಲ್ಲಿ ಅನೇಕ ಆರೋಗ್ಯವರ್ಧಕ ಅಂಶಗಳಿವೆ.
ಕೊತ್ತಂಬರಿ ಸೊಪ್ಪು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ. ಮತ್ತು ಉರಿಯೂತದ ಪರಿಣಾಮಗಳನ್ನು ಒದಗಿಸುವಂತಹ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪರಿಮಳಯುಕ್ತ ಆಹಾರ ಪದಾರ್ಥ ಇದಾಗಿದ್ದು
ಹೃದ್ರೋಗ, ಮಧುಮೇಹ, ಸ್ಥೂಲಕಾಯತೆ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಾರಕ್ಕೆ ಎರಡು ಬಾರಿಯಾದರೂ ಕೊತ್ತಂಬರಿ ಸೊಪ್ಪಿನ ಜ್ಯೂಸ್ ಕುಡಿದರೆ ಉತ್ತಮ ಕೇಶರಾಶಿ ಪಡೆಯಬಹುದು. ಇದರ ಜೊತೆಗೆ ಚರ್ಮವನ್ನು ಕೂಡಾ ಕಾಂತಿಯುಕ್ತವನ್ನಾಗಿಸಬಹುದು. ಇದರಲ್ಲಿ ರೋಗನಿರೋಧಕ ಶಕ್ತಿ ಹೇರಳವಾಗಿರುವುದರಿಂದ ಇದು ಜೀವಕೋಶದ ಹಾನಿಯನ್ನು ಕೂಡಾ ಕಡಿಮೆ ಮಾಡಲು ಸಹಾಯ ಮಾಡುತ್ತದೆ.