ನವದೆಹಲಿ: ವಾಟ್ಸಾಪ್ ಭಾರತದಲ್ಲಿ 9.7 ಮಿಲಿಯನ್ ಖಾತೆಗಳನ್ನು ಬ್ಯಾನ್ ಮಾಡಿದೆ ಎಂಬ ಆಘಾತಕಾರಿ ವರದಿ ಹೊರಬಿದ್ದಿದೆ. ಐಎಎನ್ಎಸ್ ವರದಿಯ ಪ್ರಕಾರ, ಫೆಬ್ರವರಿ 2025 ರಲ್ಲಿ ಭಾರತದ 9.7 ಮಿಲಿಯನ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ಏಪ್ರಿಲ್ 1, 2025 ರ ಮಂಗಳವಾರ ಮಾಹಿತಿ ನೀಡಿದೆ.
ಈ ನಿರ್ಧಾರಕ್ಕೆ ಕಾರಣವನ್ನು ನೀಡಿದ ಕಂಪನಿಯು, ವಾಟ್ಸಾಪ್ ಬಳಸುವ ನಿಯಮಗಳನ್ನು ಉಲ್ಲಂಘಿಸುತ್ತಿರುವ ಖಾತೆಗಳನ್ನು ಭಾರತದಲ್ಲಿ ಮುಚ್ಚಲಾಗಿದೆ ಎಂದು ಹೇಳಿದೆ. ಮಾಹಿತಿಗಳ ಪ್ರಕಾರ, ಭಾರತದಲ್ಲಿ ಸುಮಾರು 500 ಮಿಲಿಯನ್ಗಿಂತ ಹೆಚ್ಚು ವಾಟ್ಸಾಪ್ ಬಳಕೆದಾರರಿದ್ದಾರೆ. ವಾಟ್ಸಾಪ್ನ ಫೆಬ್ರವರಿ 2025 ರ ಸುರಕ್ಷತಾ ವರದಿಯ ಪ್ರಕಾರ, ಕಂಪನಿ 1.4 ಮಿಲಿಯನ್ಗಿಂತಲೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು ಬ್ಯಾನ್ ಮಾಡಿದೆ. ಆದಾಗ್ಯೂ, ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದು ವಾಟ್ಸಾಪ್ ಸ್ಪಷ್ಟಪಡಿಸಿದೆ.