ಮೊಸರು ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಗಂಜಿಗಂತೂ ಮೊಸರು, ಉಪ್ಪಿನಕಾಯಿ ಇದ್ರೆ ಅದು ಮೃಷ್ಟಾನ್ನ ಭೋಜನ. ಬೇಸಿಗೆಯಲ್ಲಿ ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ.
ಮೊಸರು ದೇಹವನ್ನು ತಂಪಾಗಿಸಲು, ಜೀರ್ಣಕ್ರಿಯೆ ಸುಧಾರಿಸಲು ಮತ್ತು ನಿರ್ಜಲೀಕರಣ ತಡೆಯಲು ಸಹಾಯಕವಾಗಿದೆ. ಕ್ಯಾಲ್ಸಿಯಂ ಸಮೃದ್ಧವಾದ ಈ ಆಹಾರದಲ್ಲಿ ಪ್ರೋಟೀನ್ ಹೇರಳವಾಗಿದೆ. ಬೇಸಿಗೆಯಲ್ಲಿ ದೇಹವನ್ನು ಶಾಖದಿಂದ ರಕ್ಷಿಸುವಲ್ಲಿ ಮೊಸರನ್ನ ಪ್ರಮುಖ ಪಾತ್ರ ವಹಿಸುತ್ತದೆ.
ಜೀವಸತ್ವ ಮತ್ತು ಖನಿಜ ಇದರಲ್ಲಿ ಸಮೃದ್ಧವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೊಸರನ್ನ ಚರ್ಮವನ್ನು ತೇವಾಂಶದಿಂದ ಇಡಲು ಮತ್ತು ಸೂರ್ಯನ ಬೆಳಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಮೊಸರನ್ನ ಆರೋಗ್ಯಕ್ಕೆ ಎಷ್ಟೇ ಪ್ರಯೋಜನ ನೀಡಿದ್ರೂ ಕೂಡಾ ವೈದ್ಯರ ಪ್ರಕಾರ ಹುಳಿ ಮೊಸರು ಅತಿಯಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ರಾತ್ರಿ ಕೂಡಾ ಮೊಸರು ಸೇವಿಸುವುದು ತಪ್ಪು ಎಂದು ಅಭಿಪ್ರಾಯ ಪಡುತ್ತಾರೆ.