ನವದೆಹಲಿ : ಸಾವಿರಾರು ಅಭ್ಯರ್ಥಿಗಳು ಪ್ರತಿ ವರ್ಷ IAS, IFS, IRS ಮತ್ತು IPS ಆಗಲು ಈ ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಅವರಲ್ಲಿ ಕೆಲವರು ಮಾತ್ರ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾರೆ. ಅಂತಹದೇ ಒಂದು ಆಯುಷ್ ಗೋಯಲ್ ಸ್ಪೂರ್ತಿದಾಯಕ ಸ್ಟೋರಿ ಇಲ್ಲಿದೆ.
ಅನೆಕರು ಪದವೀಧರರು ಅಧ್ಯಯನವನ್ನು ಮುಗಿಸಿದ ತಕ್ಷಣ ಉತ್ತಮ ಸಂಬಳದ ಉದ್ಯೋಗವನ್ನು ಹುಡುಕಲು ಆರಂಭಿಸುತ್ತಾರೆ. ಆದರೆ ದೆಹಲಿಯ ಆಯುಷ್ ಗೋಯೆಲ್ ಇದಕ್ಕೆ ವಿರುದ್ಧವೆಂಬಂತೆ ಸಾಧನೆ ಮಾಡಿ ತೋರಿಸಿದ್ದಾರೆ. 28 ಲಕ್ಷ ಸಂಬಳದೊಂದಿಗೆ ಲಾಭದಾಯಕ ಉದ್ಯೋಗವನ್ನು ಪಡೆದುಕೊಂಡರೂ, ಆದರೆ ಆಯುಷ್ ಇದನ್ನು ತ್ಯಜಿಸಿ ಬಲವಾದ ನಿರ್ಧಾರವೊಂದನ್ನು ಕೈಗೊಂಡರು.
ಆಯುಷ್ ಅವರಿಗೆ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆ ಬರೀಬೇಕು, ಸರ್ಕಾರಿ ಕೆಲಸ ಗಿಟ್ಟಿಸಬೇಕೆಂಬ ಕನಸಿತ್ತು. UPSC ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದ್ದು, ಇದನ್ನು ಪಾಸ್ ಮಾಡೋದೆ ಕಷ್ಟದ ಕೆಲಸ. ಆದ್ರೆ ಐಎಎಸ್ ಅಧಿಕಾರಿಯಾಗಬೇಕೆಂಬುದು ಆಯುಷ್ ಅವರ ಗುರಿಯಾಗಿತ್ತು. ಇದೇ ಕಾರಣಕ್ಕೆ ಆಯುಷ್ ಲಕ್ಷಗಟ್ಟಲೆ ಸಂಬಳದ ಉದ್ಯೋಗ ದೊರೆತರೂ, ಅತನ್ನು ಬಿಟ್ಟು ಯುಪಿಎಸ್‌ಸಿ ಬರೆದಿದ್ದಾರೆ.
ಆಯುಷ್ ತನ್ನ ಶಾಲಾ ಶಿಕ್ಷಣವನ್ನು ದೆಹಲಿಯ ಸರ್ಕಾರಿ ಶಾಲೆಯಾದ ರಾಜಕೀಯ ಪ್ರತಿಭಾ ವಿಕಾಸ್ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಪದವಿ ಪಡೆದ ನಂತರ, ಅವರು ಆರಂಭದಲ್ಲಿ CAT ಪರೀಕ್ಷೆಗೆ ತಯಾರಿ ಮಾಡುವತ್ತ ಗಮನಹರಿಸಿದರು. ಆ ಬಳಿಕ MBA ಮುಗಿಸಿದ ನಂತರ, JP ಮೋರ್ಗಾನ್ ಅವರು 28 ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೇಜ್ ಹೊಂದಿರುವ ಕೆಲಸ ಗಿಟ್ಟಿಸಿಕೊಂಡರು.
ಇನ್ನು ಆಯುಷ್ ಅವರ ವಿದ್ಯಾಭ್ಯಾಸಕ್ಕಾಗಿ ಮನೆಯವರು 20 ಲಕ್ಷ ಸಾಲವನ್ನು ಸಹ ಪಡೆದಿದ್ದರು. ಆಯುಷ್ಗೆ ಜಾಬ್ ಸಿಕ್ಕ ಕೂಡಲೇ ಸಾಲ ಕ್ಲಿಯರ್ ಮಾಡಬಹುದು ಎಂದು ಮನೆಯವರು ಯೋಜಿಸಿದರು. ಆದ್ರೆ ಆಯುಷ್ ಕೇವಲ 7 ತಿಂಗಳು ಮಾತ್ರ ಕೆಲಸ ಮಾಡಿದ್ರು, ನಂತರ ರಾಜೀನಾಮೆ ಕೊಟ್ಟರು. ಈ ನಿರ್ಧಾರದಿಂದ ಆಯುಷ್ ಕುಟುಂಬವೇ ಶಾಕ್ ಆಗಿತ್ತು.
2022 ರಲ್ಲಿ, ಆಯುಷ್ ಮೊದಲ ಬಾರಿಗೆ UPSC ಪರೀಕ್ಷೆಗೆ ಹಾಜರಾಗಿದ್ದರು, ಅವರ ಪ್ರಿಲಿಮ್ಸ್ ಮತ್ತು ಮುಖ್ಯ ಫಲಿತಾಂಶಗಳು , ಸಂದರ್ಶನವನ್ನೂ ಉತ್ತಮವಾಗಿ ನಿರ್ವಹಿಸಿದ ಅವರು ಮೆರಿಟ್ ಪಟ್ಟಿಯಲ್ಲಿ 171 ನೇ ರ್ಯಾಂಕ್ ಪಡೆದರು.