ಚಿತ್ರದುರ್ಗ: ಇಂದಿನ ದಿನಮಾನದಲ್ಲಿ ಮಾತೃಭಾಷೆಯ ಜೊತೆಗೆ ಆಂಗ್ಲ ಹಾಗೂ ಹಿಂದಿ ಭಾಷೆಯನ್ನು ಕಲಿಯುವ ಅನಿವಾರ್ತೆ ಇದೆ ಎಂದು ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ (ರಿ.), ಚಿತ್ರದುರ್ಗ. ಯೋಗೀಶ್ ಸಹ್ಯಾದ್ರಿ ಶಿಕ್ಷಣ ಟ್ರಸ್ಟ್ ಸಹ್ಯಾದ್ರಿಯ ಇಂಗ್ಲಿಷ್ ಅಕಾಡೆಮಿ ಸ್ಪೋಕನ್ವತಿಯಿಂದ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಇಂಗ್ಲಿಷ್ ಬೇಸಿಗೆ ಶಿಬಿರ-೨೦೨೫ರ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದ ಅವರು, ಚಿಕ್ಕ ವಯಸ್ಸಿನಿಂದಲೇ ಆಂಗ್ಲ ಭಾಷೆಯನ್ನು ಕಲಿಯುವುದರಿಂದ ಮುಂದಿನ ದಿನದಲ್ಲಿ ಅನುಕೂಲವಾಗುತ್ತದೆ. ದೊಡ್ಡವರಾದ ಮೇಲೆ ಕಲಿಯಲು ಹೋದರೆ ಸ್ವಲ್ಪ ಕಷ್ಟವಾಗುತ್ತದೆ ಎಂದರು.
ವರ್ಷ ಪೂರ್ತಿ ಕಲಿಕೆಯಲ್ಲಿ ತೊಡಗಿದ ಮಕ್ಕಳು ಈ ಬೇಸಿಗೆ ರಜೆಯಲ್ಲಿ ಈ ರಿತಿಯಾದ ಶಿಬಿರದಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ಹೂರತೆಗೆಯುವ ಕಾರ್ಯವನ್ನು ಮಾಡಬಹುದಾಗಿದೆ, ಇದರಿಂದ ಮಕ್ಕಳಲ್ಲಿನ ಬುದ್ದಿವಂತಿಕೆಯೂ ಸಹಾ ಹೆಚ್ಚಾಗುತ್ತದೆ, ಇಂದಿನ ದಿನಮಾನದಲ್ಲಿ ನಮ್ಮ ಮಾತೃಭಾಷೆಯನ್ನು ಕಡ್ಡಾಯವಾಗಿ ಕಲಿಯಲೇಬೇಕಿದೆ ಇದರ ಜೊತೆಗೆ ನಮ್ಮ ರಾಷ್ಟ್ರ ಭಾಷೆಯಾದ ಹಿಂದಿಯನ್ನು ಕಲಿಯುವುದರಿಂದ ನಮ್ಮ ದೇಶದಲ್ಲಿ ಎಲ್ಲೆ ಹೋದರೂ ಸಹಾ ಅದನ್ನು ಬಳಕೆ ಮಾಡಬಹುದಾಗಿದೆ ಇದರೊಂದಿಗೆ ಬೇರೆ ದೇಶಕ್ಕೆ ಹೋಗಬೇಕಾದ ಅನಿವಾರ್ಯತೆ ಬಂದಾಗ ನಮಗೆ ಆಂಗ್ಲ ಭಾಷೆ ಕಡ್ಡಾಯವಾಗಿ ಬರಲೇ ಬೇಕಿದೆ ಇದರಿಂದ ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಆಂಗ್ಲ ಭಾಷೆಯನ್ನು ಮತ್ತು ಅದರ ಸಾಹಿತ್ಯವನ್ನು ಕಲಿಸಬೇಕಿದೆ ಮಕ್ಕಳು ಸಹಾ ಕಲಿಯಬೇಕಾದ ಅನಿವಾಯರ್ತೆ ಇದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.
ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿ ಮಾತನಾಡಿ, ನಮ್ಮ ಮಕ್ಕಳು ಅದರಲ್ಲೂ ಸರ್ಕಾರಿ ಶಾಲೆಯ ಮಕ್ಕಳು ಆಂಗ್ಲ ಭಾಷೆ ಕಲಿಕೆಯಲ್ಲಿ ಸ್ವಲ್ಪ ಹಿಂದೆ ಇದ್ದಾರೆ ಈ ಭಾಷೆಯನ್ನು ಕಬ್ಬಿಣದ ಕಡಲೆ ಎಂದು ಕೊಂಡಿದ್ದಾರೆ ಆದರೆ ಆಂಗ್ಲ ಭಾಷೆ ಕಲಿಯುವುದು ಸುಲಭವಾಗಿದೆ ಅದಕ್ಕೆ ತಕ್ಕ ಆಸಕ್ತಿಯನ್ನು ನೀಡಬೇಕಿದೆ. ನಮ್ಮ ಸಂಸ್ಥೆವತಿಯಿಂದ ಚಿತ್ರದುರ್ಗದಲ್ಲಿ ಮಕ್ಕಳ ಅನುಕೂಲಕ್ಕಾಗಿ ಮೂರು ಕಡೆಗಳಲ್ಲಿ ಈ ರೀತಿಯಾದ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಪೋಷಕರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಮಕ್ಕಳಲ್ಲಿ ಅಗಾದವಾದ ಪ್ರತಿಭೆ ಆಡಗಿರುತ್ತದೆ ಅದನ್ನು ಈ ರೀತಿಯ ಶಿಬಿರಗಳಲ್ಲಿ ಹೋರ ತೆಗೆಯುವ ಕಾರ್ಯವನ್ನು ಮಾಡಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ರೊ ಎಂ.ಕೆ. ರವೀಂದ್ರ, ಜ್ಞಾನಭಾರತಿ ವಿದ್ಯಾ ಮಂದಿರದ ಕಾರ್ಯದರ್ಶಿ ಡಾ. ಕೆ. ರಾಜೀವ್ ಲೋಚನ ಕಾರ್ಯದರ್ಶಿ ಶ್ರೀಮತಿ ಚೈತ್ರ ಸಿ. ಭಾಗವಹಿಸಿದ್ದರು. ಕು.ಚೇತನ, ಭುವನ ಪ್ರಾರ್ಥಿಸಿದರೆ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಯಶೋಧರ ಜಿ.ಎನ್ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.