ಕನ್ನಡದ ಅಚುಮೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿದ್ದ ಮಿಥುನ ರಾಶಿ ಮುಕ್ತಾಯಗೊಂಡರು, ವೀಕ್ಷಕರು ಮಿಥುನ ರಾಶಿಯಲ್ಲಿ ಅಭಿನಯಿಸಿದ್ದ ನಟ-ನಟಿಯನ್ನು ಮರೆತಿಲ್ಲ.
ಮಿಥುನ ರಾಶಿ ಧಾರಾವಾಹಿಯಲ್ಲಿ ಅಕ್ಕ-ತಂಗಿ ಬಾಂಡಿಂಗ್ ಕೂಡ ತುಂಬಾ ಚೆನ್ನಾಗಿತ್ತು. ಇದರ ಜೊತೆಯಲ್ಲೇ ಅಣ್ಣ ಹಾಗೂ ತಮ್ಮನ ಬಾಂಧವ್ಯದ ಬಗ್ಗೆ ವೀಕ್ಷಕರಲ್ಲೂ ಒಳ್ಳೆಯ ಅಭಿಪ್ರಾಯ ಮೂಡಿತ್ತು. ಈ ಸೀರಿಯಲ್ ಕೊನೆಗೊಂಡಾಗ ಕನ್ನಡದ ಧಾರವಾಹಿ ಪ್ರೇಮಿಗಳು ಬೇಸರಗೊಂಡಿದ್ದರು. ಇದನ್ನೂ ಓದಿ: ಈ ವರ್ಷವೇ ಮದುವೆಯಾಗಲಿದ್ದಾರೆ ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಇಂದು ಇದೇ ಮಿಥುನ ರಾಶಿ ಸೀರಿಯಲ್ ಮೂಲಕ ಫೇಮಸ್ ಆಗಿದ್ದ ನಟ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಿಥುನ ರಾಶಿ ಸೀರಿಯಲ್ನಲ್ಲಿ ಸಮರ್ಥ್ ಅಲಿಯಾಸ್ ಬಾಬು ಪಾತ್ರದಲ್ಲಿ ಅಭಿನಯಿಸುತ್ತಿದ್ದರು ನಟ ಯದುಶ್ರೇಷ್ಠ. ಈಗ ನಟ ಯದುಶ್ರೇಷ್ಠ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದ್ರೆ ನಟ ವರಿಸಿದ ಹುಡುಗಿ ಯಾರು ಎಂದು ಹೇಳಿಕೊಂಡಿಲ್ಲ.