ಮಹದೇಶ್ವರ ಬೆಟ್ಟ:ಗಂಡನ ಜೊತೆ ಮುನಿಸಿಕೊಂಡ ಪತ್ನಿ ಮಲೆ ಮಹದೇಶ್ವರ ಬೆಟ್ಟದ ಕಾಡೊಲ ಗ್ರಾಮದ ಸುಶೀಲಾ (30), ಮಕ್ಕಳಾದ ಚಂದ್ರ (7) ಹಾಗೂ ಮಗಳು ದಿವ್ಯಾ (11) ಎಂಬುವರ ಜೊತೆ ಭಾನುವಾರ ಸಂಜೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾದಯ್ಯ ಎಂಬುವನ ಜೊತೆ 12 ವರ್ಷಗಳ ಹಿಂದೆ ಮದುವೆಯಾಗಿತ್ತು. ಸೋಮವಾರ ಬೆಳಿಗ್ಗೆ ಮಗಳು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಮನೆಯವರು ಹುಡುಕಾಟ ನಡೆಸಿದರು.
ಸೋಮವಾರ ಮಾದಯ್ಯ ಎಂಬುವರ ಜಮೀನಿನ ತೆರೆದ ಬಾವಿಯಲ್ಲಿ ಮೃತದೇಹಗಳು ಪತ್ತೆಯಾದವು. ಈ ಸಾವಿಗೆ ನನ್ನ ಅಳಿಯನೇ ಕಾರಣ ಎಂದು ಈರಣ್ಣ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸರು ಆರೋಪಿ ಮಹೇಶನನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.