ಶಿವಮೊಗ್ಗ: ಇಲ್ಲಿಯ ಉದ್ಯಮಿಯೊಬ್ಬರಿಗೆ ವ್ಯಕ್ತಿಯೊಬ್ಬ ಜೈಲಿನಿಂದಲೇ ಹಣದ ಬೇಡಿಕೆಯಿಟ್ಟ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜೆ.ಸಿ.ನಗರದಲ್ಲಿ ಪಾತ್ರೆ ಅಂಗಡಿಯಿಟ್ಟುಕೊಂಡು ಜೀವನ ನಡೆಸುತ್ತಿದ್ದ ಮಾಲಿಕರಿಗೆ ಅವರ ಸಂಬಂಧಿ ಕವಿರಾಜ್ ಎಂಬುವನೇ ಐದು ಬಾರಿ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ. ಹಣ ಕೊಡದಿದ್ದರೆ ಜೈಲಿನಿಂದ ಹೊರಗಡೆ ಬಂದ ಮೇಲೆ ನೋಡಿಕೊಳ್ಳುವ ಧಮ್ಕಿ ಹಾಕಿದ್ದಾನೆ.
ಭದ್ರಾವತಿ ಗ್ರಾಮಾಂತರ ಭಾಗದಲ್ಲಿ ಮಾ. ೨೫ರಂದು ದರೋಡೆ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ಕವಿರಾಜ್ ಮತ್ತು ಆತನ ಕಡೆಯವರನ್ನು ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಿಂದ ಹೊರಗೆ ಬಂದ ಕವಿರಾಜ್ ತಮ್ಮ ಸಂಬಂಧಿಗೆ ಕರೆ ಮಾಡಿ ಹಣದ ಬೇಡಿಯನ್ನಿಟ್ಟಿದ್ದ.
ಹಣ ನೀಡದಿದ್ದರೆ ಜೈಲಿನಿಂದ ಬಿಡುಗಡೆಯಾಗಿ ಬಂದ ಮೇಲೆ ನೋಡಿಕೊಳ್ಳುವೆ ಎಂದು ಬೆದರಿಕೆಯನ್ನೊಡ್ಡಿದ್ದ. ಪಾತ್ರೆ ಅಂಗಡಿಯ ಮಾಲೀಕ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವಿಚಾರವಾಗಿ ಆತನನ್ನ ವಶಕ್ಕೆ ಪಡೆದ ದೊಡ್ಡಪೇಟೆ ಪೊಲೀಸರು. ಸೂಕ್ತ ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎಂದು ತಿಳಿಸಲಾಗಿದೆ.
