ನೀವು ಬ್ಯಾಂಕಿನಲ್ಲಿ ಸರ್ಕಾರಿ ಉದ್ಯೋಗ ಅರಸುತ್ತಿದ್ದರೆ ಇದು ಸುವರ್ಣವಕಾಶ ಎಂದೇ ಹೇಳಬಹುದು. ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಹೊರಡಿಸಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಒಟ್ಟು ಮೂವತ್ತು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು ಎಸ್ ಬಿ ಐ ವಿಮರ್ಶಕರ ಹುದ್ದೆಗೆ ಇದೀಗ ಅರ್ಜಿ ಆಹ್ವಾನಿಸಲಾಗುತ್ತಿದೆ. ಇದೇ ಬರುವ ಎಪ್ರಿಲ್ ಇಪ್ಪತ್ತೆರಡು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಎಸ್ ಬಿಐನ ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಹತೆ, ಅನುಭವ, ಸಂದರ್ಶನದ ಮುಖೇನ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ