ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆಟ್ಟು ನಿಂತಿದ್ದ ಇಂಡಿಗೋ ವಿಮಾನಕ್ಕೆ ಟೆಂಪೊ ಟ್ರಾವೆಲ್ಲರ್ ಡಿಕ್ಕಿ ಹೊಡೆದ ಘಟನೆ ಶನಿವಾರ ಸಂಜೆ ನಡೆದಿದೆ. ಇಂಜಿನ್ ಸಮಸ್ಯೆಯಿಂದ ಏರ್ಪೋರ್ಟ್ ಒಳಭಾಗದ ಅಲ್ಪಾ ಪಾರ್ಕಿಂಗ್ ಬೇ-71ರಲ್ಲಿ ಕೆಲವು ದಿನಗಳಿಂದ ವಿಮಾನವನ್ನು ನಿಲ್ಲಿಸಲಾಗಿತ್ತು. ಇದೇ ವಿಮಾನಕ್ಕೆ ಮುಂಭಾಗದ ಮೂತಿ ಬಳಿ ಟೆಂಪೊ ಟ್ರಾವೆಲ್ಲರ್ ಡಿಕ್ಕಿಯಾಗಿದೆ.
ಟೆಂಪೊ ಟ್ರಾವೆಲ್ಲರ್ ವಿಮಾನದ ಮೂತಿ ಭಾಗದ ಕೆಳಗೆ ಸಿಲುಕಿಕೊಂಡು ಟಾಪ್ ಜಖಂ ಆಗಿದೆ. ಘಟನೆಯಲ್ಲಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ರನ್ವೇಗೆ ಸಿಬ್ಬಂದಿಯನ್ನು ಬಿಟ್ಟು ಬರುತ್ತಿದ್ದ ಟಿಟಿ ವಾಹನ ಹೋಗಿ ವಿಮಾನದ ಮೂತಿಯ ಕೆಳಗೆ ಸಿಲುಕಿಕೊಂಡಿದೆ.