ಚಿತ್ರದುರ್ಗ: : ನಿವೇಶನ ಹಾಗೂ ಕಟ್ಟಡದ ಇ- ಸ್ವತ್ತು ಮಾಡಿಕೊಡಲು ಲಂಚಕ್ಕೆ ಬೇಡಿ-ಕೆಯಿಟ್ಟಿದ್ದ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ಜಿ.ವಿ. ಅವರು ₹25,000 ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪಟ್ಟಣದ ಡಿ.ಎಚ್.ಇ ಕುಮಾರ್ ಅವರ ನಿವೇಶನ ಹಾಗೂ ಕಟ್ಟಡದ ಇ- ಸ್ವತ್ತು ಮಾಡಿಕೊಡಲು ಅವರ ಪರವಾಗಿ ಪುರಸಭೆ
ಸದಸ್ಯ ಎನ್. ಶಂಕರಪ್ಪ ಪುರಸಭೆಗೆ ದಾಖಲೆ ಒದಗಿಸಿದ್ದರು. ಮುಖ್ಯಾಧಿಕಾರಿ ಇ- ಸ್ವತ್ತು ಮಾಡಿಕೊಡಲು ಸತಾಯಿಸಿ ಕಡೆಗೆ * 50,000 ಲಂಚದ ಬೇಡಿಕೆ ಇಟ್ಟಿದ್ದರು. ದೂರುದಾರರ ಕೋರಿಕೆ ಮೇರೆಗೆ ₹25,000ಕ್ಕೆ ಒಪ್ಪಿದ್ದರು.
ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿದರು. ಲೋಕಾಯುಕ್ತ ಎಸ್‌ಪಿ ವಾಸುದೇವರಾಮ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್‌ಪಿ ಎನ್. ಮೃತ್ಯುಂಜಯ, ಬಸವರಾಜ ಬಿ.ಲಮಾಣಿ, ಮುಸ್ತಾಕ್ ಅಹಮದ್, ಜಿ.ಎಂ. ತಿಪ್ಪೇಸ್ವಾಮಿ, ಎಚ್. ಶ್ರೀನಿವಾಸ್, ಎಸ್. ಆರ್. ಪುಷ್ಪಾ, ಮಂಜುನಾಥ್, ಸತೀಶ್ ಭಾಗವಹಿಸಿದ್ದರು.