ವಾಷಿಂಗ್ಟನ್: ಅಮೆರಿಕದ ಫ್ಲೋರಿಡಾದಲ್ಲಿ ಭೀಕರ ವಿಮಾನ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, 282 ಪ್ರಯಾಣಿಕರು ಪವಾಡಸದೃಶವಾಗಿ ಪಾರಾಗಿದ್ದಾರೆ. ಸೋಮವಾರ (ಸ್ಥಳೀಯ ಸಮಯ) ಒರ್ಲ್ಯಾಂಡೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್ ಲೈನ್ಸ್ ವಿಮಾನ ಟೇಕ್ ಆಫ್ ಆಗುವಾಗ ವಿಮಾನದ ಎರಡೂ ಇಂಜಿನ್ಗೆ ಬೆಂಕಿ ಹೊತ್ತಿಕೊಂಡಿದೆ.
ಇದನ್ನು ಗಮನಿಸಿದ ಪೈಲಟ್ ಕೂಡಲೇ ವಿಮಾನವನ್ನು ನಿಲ್ಲಿಸಿದ್ದು, ನಂತರ ಪ್ರಯಾಣಿಕರನ್ನು ತುರ್ತು ಸ್ಲೈಡ್ಗಳ ಮೂಲಕ ಸ್ಥಳಾಂತರಿಸಲಾಗಿದೆ.ಅಟ್ಲಾಂಟಾಗೆ ತೆರಳುತ್ತಿದ್ದ ವಿಮಾನ ರನ್ವೇಗೆ ಹೊರಟಾಗ ಎರಡು ಎಂಜಿನ್ಗಳಲ್ಲಿ ಒಂದು ಬೆಂಕಿಗೆ ಆಹುತಿಯಾಯಿತು. ಟರ್ಮಿನಲ್ನಲ್ಲಿ ಪ್ರಯಾಣಿಕರೊಬ್ಬರ ತಮ್ಮ ಸೆಲ್ಫೋನ್ನಲ್ಲಿ ಈ ವಿಡಿಯೋ ಸೆರೆ ಹಿಡಿದಿದ್ದು, ವಿಮಾನದ ಬಲ ಇಂಜಿನ್ನಿಂದ ಜ್ವಾಲೆ ಹೊರಬರುತ್ತಿರುವ ವಿಡಿಯೋ ವೈರಲ್ ಆಗಿದೆ. ಘಟನೆಯ ಬಗ್ಗೆ ಎಫ್ಎಎ ತನಿಖೆಯನ್ನು ಪ್ರಾರಂಭಿಸಿದೆ.
ವಿಮಾನದಲ್ಲಿ 282 ಪ್ರಯಾಣಿಕರಿದ್ದರು, ಅದೃಷ್ಟವಶಾತ್, ಯಾವುದೇ ಹಾನಿಯಾಗಿಲ್ಲ. ವಿಮಾನದ ಎರಡು ಇಂಜಿನ್ಗಳಲ್ಲಿ ಒಂದರ ಟೈಲ್ಪೈಪ್ನಲ್ಲಿ ಜ್ವಾಲೆಗಳು ಕಂಡುಬಂದಾಗ ಡೆಲ್ಟಾ ವಿಮಾನ ಸಿಬ್ಬಂದಿ ಪ್ರಯಾಣಿಕರ ಕ್ಯಾಬಿನ್ ಅನ್ನು ಸ್ಥಳಾಂತರಿಸಲು ಕಾರ್ಯವಿಧಾನಗಳನ್ನು ಅನುಸರಿಸಿದರು ಎಂದು ಸಿಎನ್ಎನ್ ವರದಿ ಮಾಡಿದೆ.