ಗೃಹ ವ್ಯವಹಾರಗಳ ಸಚಿವಾಲಯವು ಮಾರುಕಟ್ಟೆಯಲ್ಲಿ ಈಗಾಗಲೇ ಚಲಾವಣೆಯಲ್ಲಿರುವ ಹೊಸ ನಕಲಿ ರೂ. 500 ನೋಟಿನ ಬಗ್ಗೆ ಹೈ ಅಲರ್ಟ್ ನೀಡಿದೆ. ಅಲ್ಲದೇ ರಿಯಲ್ ನೋಟುಗಳು ಮತ್ತು ಫೇಕ್ ನೋಟುಗಳು ನಡುವಿನ ಹೋಲಿಕೆ, ವ್ಯತ್ಯಾಸದ ಕುರಿತು ಎಚ್ಚರಿಕೆ ನೀಡಿದೆ.
ಅಧಿಕೃತ ನೋಟುಗಳ ಗುಣಮಟ್ಟ ಮತ್ತು ಮುದ್ರಣವನ್ನು ನಕಲಿ 500 ರೂ. ನೋಟುಗಳಲ್ಲಿ ಬಹುತೇಕ ಹೋಲಿಕೆ ಇದೆ. ಆದ್ದರಿಂದ ಯಾವುದೇ ಸಾಮಾನ್ಯ ವ್ಯಕ್ತಿಗೆ ಅದನ್ನು ಕಂಡು ಹಿಡಿಯುವುದು ತುಂಬಾ ಕಷ್ಟ.
ವಿಶೇಷವಾಗಿ ನೋಟುಗಳ ಸತ್ಯಾಸತ್ಯತೆಯ ಬಗ್ಗೆ ಹೆಚ್ಚು ಗಮನ ಹರಿಸದಿದ್ದಾಗ, ಸರ್ಕಾರಕ್ಕೆ ಇಂತಹ ನೋಟುಗಳನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಆದರೂ ಈ ನಕಲಿ ನೋಟಿನಲ್ಲಿ ಒಂದು ದೋಷವಿದೆ, ಹೀಗಾಗಿ ನೀವು ಅವುಗಳನ್ನು ಗುರುತಿಸಲು ಸಾಧ್ಯವಾಗಬಹುದು.
‘RESERVE BANK OF INDIA’ ಎಂಬ ಪದಗಳಲ್ಲಿ, ‘RESERVE’ ಎಂಬ ಪದದ ‘E’ ಅಕ್ಷರವನ್ನು ‘A’ ಅಕ್ಷರದಿಂದ ತಪ್ಪಾಗಿ ಬದಲಾಯಿಸಲಾಗಿದೆ. ಈ ಸಣ್ಣ ದೋಷವು ನಿಮ್ಮನ್ನು ನಕಲಿ ನೋಟಿನ ನಷ್ಟದಿಂದ ರಕ್ಷಿಸುವುದಲ್ಲದೆ, ನಕಲಿ ನೋಟುಗಳನ್ನು ಹುಡುಕಲು ಇದು ಒಂದು ಉತ್ತಮ ಮಾರ್ಗವಾಗಿದೆ. ಈಗಾಗಲೇ ಮಾರುಕಟ್ಟೆಗೆ ನಕಲಿ ನೋಟುಗಳು ಬೃಹತ್ ಪ್ರಮಾಣದಲ್ಲಿ ಪ್ರವೇಶಿಸಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಹಣಕಾಸು ಸಂಸ್ಥೆಗಳು, ಬ್ಯಾಂಕ್ ಗಳು ಹಾಗೂ ಸಂಬಂಧಿತ ಸಂಸ್ಥೆಗಳನ್ನು ತೀವ್ರ ಕಟ್ಟೆಚ್ಚರದಲ್ಲಿಡಲಾಗಿದೆ.
ಇನ್ನೂ ಈ ನಕಲಿ ನೋಟುಗಳನ್ನು ಗುರುತಿಸಲು ಅಥವಾ ಪತ್ತೆಗೆ ನೆರವು ನೀಡಲು ಈ ನಕಲಿ ನೋಟಿನ ಚಿತ್ರವನ್ನೂ ಕೂಡ ಹಂಚಿಕೊಳ್ಳಲಾಗಿದೆ.
ಈ ಕುರಿತು ಎಚ್ಚರ ವಹಿಸಬೇಕು ಎಂದು ನಾಗರಿಕರು ಹಾಗೂ ಹಣಕಾಸು ಸಂಸ್ಥೆಗಳಿಗೆ ಸೂಚಿಸಿರುವ ಪ್ರಾಧಿಕಾರಗಳು, ಯಾವುದೇ ಬಗೆಯ ಸಂಶಯಾಸ್ಪದ ನೋಟುಗಳ ಕುರಿತು ವರದಿ ಮಾಡುವಂತೆ ನಿರ್ದೇಶನ ನೀಡಿವೆ.