ಮುಂಬೈ : ಹೊಸ ಕ್ರಿಕೆಟ್ ಲೀಗ್ ಪ್ರಾರಂಭಿಸಲು ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಮುಂದಾಗಿದ್ದಾರೆ. ಯುವರಾಜ್ ಸಿಂಗ್ ಹಾಗೂ 333 Sports Inc, ಕೆನಡಾ ಕ್ರಿಕೆಟ್ ಅಸೋಸಿಯೇಷನ್ ಸಹಯೋಗದಲ್ಲಿ ಸೂಪರ್-60 ಹೆಸರಿನಲ್ಲಿ ಟಿ೧೦ ಪ್ರಾರಂಭಿಸಲಿದ್ದಾರೆ.
ಈ ಟಿ10 ಲೀಗ್ ಕೆನಾಡದಲ್ಲಿ ನಡೆಯಲಿದ್ದು, ಈಗಾಗಲೇ ಆಟಗಾರರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈಗಾಗಲೇ 1300 ಕ್ಕೂ ಅಧಿಕ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಸ್ಲ್ಯಾಮ್-ಬ್ಯಾಂಗ್ ಟಿ10 ಸ್ವರೂಪದಲ್ಲಿ ನಡೆಯಲಿರುವ ಲೀಗ್ಗಾಗಿ 1135 ಪುರುಷ ಮತ್ತು 235 ಮಹಿಳಾ ಆಟಗಾರ್ತಿಯರು ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಡ್ರಾಫ್ಟ್ ಪ್ರಕ್ರಿಯೆ ನಡೆಯಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಸೂಪರ್-60 ಟಿ10 ಲೀಗ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದ್ದು, ಈ ತಂಡಗಳ ಘೋಷಣೆ ಶೀಘ್ರದಲ್ಲೇ ನಡೆಯಲಿದೆ. ಅಲ್ಲದೆ ಇದೇ ವರ್ಷ ಜುಲೈನಲ್ಲಿ ಟೂರ್ನಿಯನ್ನು ಆಯೋಜಿಸಲು ತೀರ್ಮಾನಿಸಲಾಗಿದೆ