ನವದೆಹಲಿ: ಅಮೆರಿಕ-ಚೀನಾ ವ್ಯಾಪಾರ ಸಮರ ನಡೆಯುತ್ತಿರುವ ಹೊತ್ತಲ್ಲೇ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ದಾಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಮಂಗಳವಾರ 1 ಗ್ರಾಂಗೆ 10,135 ರೂ. ತಲುಪಿದ್ದು, 10 ಗ್ರಾಂಗೆ 1,01,135 ರೂ.ಗೆ ಏರಿಕೆಯಾಗಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಚಿನ್ನದ ಬೆಲೆ 1 ಲಕ್ಷ ರೂ. ದಾಟಿದೆ.
22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 9,290 ರೂ.ಗೆ ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 92,900 ರೂ. ತಲುಪಿದೆ.
ಇತರೆ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಸುಂಕ ವಿಧಿಸಿದ್ದೇ ಚಿನ್ನದ ಬೆಲೆ ದಾಖಲೆಯ ಏರಿಕೆಗೆ ಕಾರಣ ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಹೀಗಾಗಿ, ಸುರಕ್ಷಿತ ಹೂಡಿಕೆಗಾಗಿ ಹೂಡಿಕೆದಾರರು ಚಿನ್ನದತ್ತ ಆಕರ್ಷಿತರಾಗಿದ್ದಾರೆ