ದಾವಣಗೆರೆ : ಜಗಳೂರು ತಾಲ್ಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೊಸದಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಕಾರ್ಯಕ್ರಮದಡಿ ಸಣ್ಣ, ಅತಿಸಣ್ಣ, ಪರಿಶಿಷ್ಟಜಾತಿ, ಹಾಗೂ ಪರಿಶಿಷ್ಟ ಪಂಗಡದ ಅರ್ಹ ರೈತರು ಅರ್ಜಿ ಸಲ್ಲಿಸಬಹುದು. ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ದಾಳೆಂಬೆ, ನಿಂಬೆ ಗೋಂಡAಬಿ, ಮಲ್ಲಿಗೆ, ವೀಳ್ಯೆದೆಲೆ, ತೆಂಗು, ಮಾವು, ಸಪೋಟ, ಸೀಬೆ, ಅಂಗಾAಶಬಾಳೆ, ಪಪ್ಪಾಯ, ಕರಿಬೇವು, ಕಾಳುಮೆಣಸು, ಕೋಕೋ, ನೇರಳೆ, ಸೀತಾಫಲ, ಡ್ರ್ಯಾಗಪ್ರೂಟ್ಸ್, ಇತ್ಯಾದಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಆಸಕ್ತ ರೈತರು ಅಗತ್ಯ ದಾಖಲಾತಿಗಳೊಂದಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಜಗಳೂರು ಕಛೇರಿಗೆ ಅಥವಾ ಆಯಾ ಗ್ರಾಮ ಪಂಚಾಯತಿಗೆ ಸಲ್ಲಿಸಬಹುದು. ಜಾಬ್ ಕಾರ್ಡ್ ರೈತರ ಹೆಸರಿನಲ್ಲಿ ಇರುವುದು ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಬAಧಪಟ್ಟ ಹೋಬಳಿಮಟ್ಟದ ಸಹಾಯಕ ತೋಟಗಾರಿಕ ಅಧಿಕಾರಿಗಳನ್ನು ಸಂಪರ್ಕಿಸಬಹುದೆAದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ತಿಳಿಸಿದ್ದಾರೆ.