ನವದೆಹಲಿ : ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಕೂಡಲೇ ವಾಪಾಸ್ ಕಳುಹಿಸಲು ಕೇಂದ್ರ ಸರ್ಕಾರ ಆದೇಶಿಸಿದೆ. ಅವರ ವೀಸಾಗಳನ್ನು ರದ್ದು ಮಾಡಲು ಸೂಚಿಸಿದೆ.
ಈ ನಡುವೆ ಭಾರತದಲ್ಲಿ ಪಾಕಿಸ್ತಾನದ 14,000 ಪ್ರಜೆಗಳು ಇರಬಹುದೆಂದು ಅಂದಾಜು ಮಾಡಲಾಗಿದೆ. ಭಾರತ ಸರ್ಕಾರ ವಾರ್ಷಿಕ 1.5-2 ಲಕ್ಷ ಪಾಕಿಸ್ತಾನ ಪ್ರಜೆಗಳಿಗೆ ವೀಸಾ ನೀಡುತ್ತದೆ. ವಿವಿಧ ಉದ್ದೇಶಗಳಿಗಾಗಿ ಪಾಕ್ ಪ್ರಜೆಗಳಿಗೆ ಭಾರತ ವೀಸಾ ನೀಡುತ್ತದೆ. ಕುಟುಂಬ ಸದಸ್ಯರು, ಸ್ನೇಹಿತರನ್ನು ಭೇಟಿಯಾಗಲು ವಿಸಿಟರ್ ವೀಸಾ ನೀಡಲಾಗುವುದು. ಕಾನೂನು ಉದ್ದೇಶಗಳಿಗಾಗಿಯೂ ವಿಸಿಟರ್ ವೀಸಾ ನೀಡಲಾಗುವುದು.
ಪಾಕಿಸ್ತಾನದ ಪ್ರಜೆಗಳಿಗೆ ಭಾರತಕ್ಕೆ ಪ್ರವಾಸಿ ವೀಸಾಗೆ ಅವಕಾಶವಿಲ್ಲ. ಪ್ರವಾಸಿ ವೀಸಾ ಬದಲು ವಿಸಿಟರ್ ವೀಸಾಗೆ ಅರ್ಜಿ ಸಲ್ಲಿಸ ಬೇಕಾಗುತ್ತದೆ.ಈ ವಿಸಿಟರ್ ವೀಸಾ ಅವಧಿ ಸಾಮಾನ್ಯವಾಗಿ 3 ತಿಂಗಳು ಮಾನ್ಯವಾಗಿರುತ್ತದೆ. ವ್ಯಾಪಾರ ಸಭೆ, ಕಾರ್ಯಕ್ರಮಗಳಿಗಾಗಿ ವ್ಯಾಪಾರ ವೀಸಾ ನೀಡಲಾಗುತ್ತದೆ. ಪಾಕಿಸ್ತಾನ ಕಂಪನಿ, ಸಂಸ್ಥೆಯಿಂದ ಆಹ್ವಾನ ಪತ್ರಿಕೆ ಲಗತ್ತಿಸಬೇಕಿರುತ್ತದೆ. ವ್ಯಾಪಾರ ವೀಸಾ 6 ತಿಂಗಳವರೆಗೆ ಬಹು ಪ್ರವೇಶಕ್ಕೆ ಅವಕಾಶವಿರುತ್ತದೆ.