ಕಲಬುರಗಿ: 26 ಮಂದಿ ಹಿಂದೂ ಪ್ರವಾಸಿಗರ ಸಾವಿಗೆ ಕಾರಣವಾದ ಪಹಲ್ಗಾಮ್ ಉಗ್ರ ದಾಳಿ ಕೃತ್ಯವನ್ನು ವಿರೋಧಿಸಿ ಕಲಬುರಗಿಯಲ್ಲಿ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಈ ವೇಳೆ ಕಾರ್ಯಕರ್ತರು ರಸ್ತೆಗೆ ಅಂಟಿಸಿದ್ದ ಪಾಕಿಸ್ತಾನದ ಧ್ವಜವನ್ನು ತೆಗೆದು ರಕ್ಷಿಸುವ ಮೂಲಕ ಕೆಲ ಮಹಿಳೆಯರು ಪಾಕ್ ಪ್ರೇಮ ಮೆರೆದಿದ್ದಾರೆ.ಹೌದು.. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮನಲ್ಲಿ ಅಮಾಯಕರ ಮೇಲಿನ ಉಗ್ರರ ದಾಳಿ ಖಂಡಿಸಿ ನಗರದ ವಿವಿಧೆಡೆ ಕಡೆ ಪಾಕಿಸ್ತಾನದ ಧ್ವಜವನ್ನು ನೆಲಕ್ಕೆ ಅಂಟಿಸುವ ಮುಖಾಂತರ ಬಜರಂಗ ದಳದ ಕಾರ್ಯಕರ್ತರೂ ಆಕ್ರೋಶ ವ್ಯಕ್ತಪಡಿಸಿದರು.
ಬಜರಂಗದಳದ ಕಾರ್ಯಕರ್ತರು ನಗರದ ಜಗತ್ ವೃತ್ತ ಸೇರಿದಂತೆ ನಗರದ ಇತರೆ ಪ್ರಮುಖ ಪ್ರದೇಶಗಳಲ್ಲಿ ಪಾಕ್ ಧ್ವಜಗಳನ್ನು ರಸ್ತೆ, ಶೌಚಾಲಯ ಪ್ರದೇಶಗಳಲ್ಲಿ ಅಂಟಿಸಿದ್ದಾರೆ.ಇನ್ನು ಈ ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪಾಕಿಸ್ತಾನ ಧ್ವಜವನ್ನು ಅಂಟಿಸಿದ ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗುಪ್ತಚರ ಇಲಾಖೆ ಸಿಬ್ಬಂದಿ, ಮತ್ತು ಬ್ರಹ್ಮಪುರ ಠಾಣೆಯ ಪೊಲೀಸರು ಅಂಟಿಸಿದ ಧ್ವಜವನ್ನು ತೆರವುಗೊಳಿಸಿದ್ದಾರೆ