ನವದೆಹಲಿ : ಫ್ರಾನ್ಸ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳು ಮತ್ತಷ್ಟು ಸಂಖ್ಯೆಯಲ್ಲಿ ಭಾರತದ ನೌಕಪಡೆಗೆ ಸೇರ್ಪಡೆಗಳಿಳಲಿದೆ. ಭಾರತೀಯ ನೌಕಾಪಡೆಗೆ 26 ರಫೇಲ್ ಜೆಟ್ಗಳನ್ನು ಪಡೆಯಲು ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ಮಧ್ಯೆ ಒಪ್ಪಂದ ಆಗಿದೆ. ಆನ್ಲೈನ್ನಲ್ಲಿ ಈ 64,000 ಕೋಟಿ ರೂ ಮೌಲ್ಯದ ಒಪ್ಪಂದಕ್ಕೆ ಸರ್ಕಾರಗಳು ಅಂಕಿತ ಹಾಕಿದವು.
ಭಾರತದ ವತಿಯಿಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿದ್ದರು. ಏಪ್ರಿಲ್ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಭದ್ರತಾ ಸಮಿತಿ (ಸಿಸಿಎಸ್) ಈ ಒಪ್ಪಂದಕ್ಕೆ ಹಸಿರು ನಿಶಾನೆ ಕೊಟ್ಟಿತ್ತು.
ಭಾರತದ ನೌಕಾಪಡೆಗೆ ಅಗತ್ಯ ಇರುವ ಫೈಟರ್ ಜೆಟ್ಗಳಿಗೆ ರಫೇಲ್ ಅಲ್ಲದೆ ಬೇರೆ ಬೇರೆ ಆಯ್ಕೆಗಳನ್ನು ಅವಲೋಕಿಸಲಾಗಿತ್ತು. ಅಮೆರಿಕದ ಬೋಯಿಂಗ್ ಸಂಸ್ಥೆಯ ಎಫ್/ಎ18 ಸೂಪರ್ ಹಾರ್ನೆಟ್ ಯುದ್ಧವಿಮಾನವೂ ಬಿಡ್ನಲ್ಲಿತ್ತು. ಆದರೆ, ಭಾರತದ ನೌಕಾಪಡೆಗೆ ರಫೇಲ್ ವಿಮಾನ ಹೆಚ್ಚು ಸೂಕ್ತವೆಂದು ಕಂಡು ಬಂದಿದ್ದರಿಂದ ಅಂತಿಮವಾಗಿ ಅದನ್ನು ಆಯ್ಕೆ ಮಾಡಲಾಗಿದೆ.