ಅಂಕಾರಾ : ನಾವು ಪಾಕಿಸ್ತಾನಕ್ಕೆ ಯಾವುದೇ ಶಸ್ತ್ರಾಸ್ತ್ರಗಳನ್ನು ಕಳುಹಿಸಿಲ್ಲ ಎಂದು ಟರ್ಕಿ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ.
ಪಾಕಿಸ್ತಾನಕ್ಕೆ ಆರು ಶಸ್ತ್ರಾಸ್ತ್ರ ವಿಮಾನಗಳನ್ನು ಟರ್ಕಿ ಕಳುಹಿಸಿದೆ ಹಲವಾರು ಸುದ್ದಿವಾಹಿನಿಗಳು ವರದಿ ಮಾಡಿದ್ದವು. ಆದರೆ ಇದಕ್ಕೆ ಸೋಮವಾರ ಅಧ್ಯಕ್ಷೀಯ ಸಂವಹನ ನಿರ್ದೇಶನಾಲಯ ಸ್ಪಷ್ಟನೆ ನೀಡಿದ್ದು, ಟರ್ಕಿಯಿಂದ ಬಂದ ಸರಕು ವಿಮಾನವು ಇಂಧನ ತುಂಬಿಸಲು ಪಾಕಿಸ್ತಾನದಲ್ಲಿ ಇಳಿಯಿತು. ನಂತರ ಅದು ತನ್ನ ಮಾರ್ಗದಲ್ಲಿ ಮುಂದುವರಿಯಿತು. ಅಧಿಕೃತ ಸಂಸ್ಥೆಗಳು ಬಿಟ್ಟು ಬೇರೆ ಯಾರಿಂದಲಾದರೂ ಊಹಾತ್ಮಕ ಹೇಳಿಕೆಗಳು, ಸುದ್ದಿಗಳು ಬಂದರೆ ಅವುಗಳನ್ನು ಪರಿಗಣಿಸಬಾರದು ಎಂದು ತಿಳಿಸಿದೆ.
ಶಸ್ತ್ರಾಸ್ತ್ರಗಳನ್ನು ಹೊತ್ತ ಟರ್ಕಿಶ್ ವಾಯುಪಡೆಯ ಸಿ -130 ಹರ್ಕ್ಯುಲಸ್ ಮಿಲಿಟರಿ ಸಾರಿಗೆ ವಿಮಾನ ಭಾನುವಾರ ಕರಾಚಿಗೆ ಬಂದಿಳಿದಿತ್ತು ಎನ್ನಲಾಗಿತ್ತು. ಬಳಿಕ ಟರ್ಕಿ ಸರಕು ವಿಮಾನದ ಚಿತ್ರವನ್ನು ಪೋಸ್ಟ್ ಮಾಡಿ ಈ ಹೇಳಿಕೆಯನ್ನು ತಳ್ಳಿಹಾಕಿದೆ.