ಕಾಸರಗೋಡು: ಹಿಂದೂ ಹೆಣ್ಣು ಮಕ್ಕಳು ಇನ್ನು ಮುಂದೆ ಬ್ಯಾಗ್‌ನಲ್ಲಿ ಚೂರಿ ಇಟ್ಕೊಂಡು ಓಡಾಡಿ. ಆಗ ನಿಮಗೆ ಯಾರೂ ಏನೂ ಮಾಡಕ್ಕಾಗಲ್ಲ ಎಂದು ಆರ್‌ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ಹೇಳಿದ್ದಾರೆ. ಪಹಲ್ಗಾಮ್‌ನಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಉಗ್ರರು ದಾಳಿ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಒಂದು ವೇಳೆ ಪಹಲ್ಗಾಮ್‌ನಲ್ಲಿ ಉಗ್ರರಿಗೆ ತಲ್ವಾರ್ ತೋರಿಸಿದರೂ ಸಾಕಿತ್ತು. ಕತೆಯೇ ಬೇರೆ ಆಗುತ್ತಿತ್ತು ಎಂದಿದ್ದಾರೆ.
ಹಿಂದೂ ಹೆಣ್ಣು ಮಕ್ಕಳು ವ್ಯಾನಿಟಿ ಬ್ಯಾಗ್‌ನಲ್ಲಿ ಪೌಡರ್, ಬಾಚಣಿಗೆ ಜತೆಗೆ ಚೂರಿಯನ್ನೂ ಇಟ್ಟುಕೊಳ್ಳಬೇಕು. ನಿಮ್ಮನ್ನು ನೀವು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಇನ್ನು ಮುಂದೆ ಹೊರಗೆ ಹೋಗುವಾಗ ಬ್ಯಾಗ್‌ನಲ್ಲಿ ಆರಿಂಚು ಉದ್ದದ ಚೂರಿ ಇಟ್ಕೊಳ್ಳಿ. ಸಂಜೆ ಮೇಲೆ ಹೊರಗಡೆ ಹೋಗುವಾಗ ನಿಮ್ಮ ಸುರಕ್ಷತೆಗೆ ಬೇಕಾಗುತ್ತದೆ.
ಚೂರಿ ಇಟ್ಕೊಳ್ಳಲು ಯಾರ ಪರ್ಮಿಷನ್ ಕೂಡ ಬೇಕಾಗಿಲ್ಲ. ಸಂಜೆ ಮೇಲೆ ಓಡಾಡುವಾಗ ಯಾರಾದರೂ ನಿಮ್ಮ ಮೇಲೆ ಆಕ್ರಮಣ ಮಾಡುತ್ತಾರೆ. ಆಗ ಅವರ ಬಳಿ ಬೇಡಿಕೊಂಡರೆ ಪ್ರಯೋಜನವಿಲ್ಲ. ಅದರ ಬದಲು ಚೂರಿ ತೋರಿಸಿ ಬಾ ಎಂದು ಸವಾಲು ಹಾಕಿ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಸಲಹೆ ನೀಡಿದ್ದಾರೆ.