ಚಿತ್ರದುರ್ಗ: ವಿಶ್ವ ಗುರು, ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವಣ್ಣನವರ ಜಯಂತ್ಸೋತ್ಸವದ ಅಂಗವಾಗಿ ವೀರಶೈವ ಸಮಾಜದವತಿಯಿಂದ ಮಂಗಳವಾರ ಬೈಕ್ ರ್ಯಾಲಿಯನ್ನು ನಡೆಸಲಾಯಿತು.
ಹೊಳಲ್ಕೆರೆ ರಸ್ತೆಯ ಚಂದ್ರವಳ್ಳಿ ಕ್ರಾಸ್ನ ಬಸವ ಪುತ್ಥಳಿಗೆ ವೀರಶೈವ ಸಮಾಜದ ಅಧ್ಯಕ್ಷರಾದ ಹೆಚ್.ಎನ್.ತಿಪ್ಪೇಸ್ವಾಮಿ ಹಾರವನ್ನು ಸಲ್ಲಿಸಿ ತದ ನಂತರ ಬೈಕ್ ರ್ಯಾಲಿಯನ್ನು ಆರಂಭ ಮಾಡಲಾಯಿತು. ಮೆರವಣಿಗೆಗೆ ಆಗಮಿಸಿದ್ದ ಬೈಕ್ಗಳಿಗೆ ಕೇಸರಿ ಬಣ್ಣದ ಬಟ್ಟೆಯಲ್ಲಿ ಬಸವೇಶ್ವರ ಭಾವಚಿತ್ರವನ್ನು ಮುದ್ರಿಸಿದ ಧ್ವಜವನ್ನು ಕಟ್ಟಲಾಗಿತ್ತು, ಇದರೊಂದಿಗೆ ಬಿಳಿ ಬಣ್ಣದ ಟೋಪಿಯಲ್ಲಿ ಬಸವೇಶ್ವರ ಭಾವಚಿತ್ರವನ್ನು ಮುದ್ರಿಸಿದನ್ನು ತಲೆಗೆ ಧರಿಸಲಾಯಿತು. ದಾರಿಯುದ್ದಕ್ಕೂ ಜೈ ಬಸವೇಶ್, ಜೈ. ಜೈ ಬಸವೇಶ್, ಬಸವೇಶ್ವರ ಮಹಾರಾಜ್ ಕೀ ಜೈ ಎಂಬ ಘೋಷಣೆಗಳು ಕೇಳಿ ಬಂದವು.
ಚಂದ್ರವಳ್ಳಿ ಕ್ರಾಸ್ನಿಂದ ಪ್ರಾರಂಭವಾದ ಬಸವೇಶ್ವರ ಬೈಕ್ ರ್ಯಾಲಿ ಹೊಳಲ್ಕೆರೆ ರಸ್ತೆ, ಸಂಗ್ಗೊಳ್ಳಿ ರಾಯಣ್ಣ ವೃತ್ತ, ಸಂತೇಪೇಟೆ ವೃತ್ತ, ಆನೆಬಾಗಿಲು ಚಿಕ್ಕಪೇಟೆ, ದೊಡ್ಡಪೇಟೆ, ರಂಗಯ್ಯನ ಬಾಗಿಲು ಬಸವಮಂಟಪ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮದಕರಿ ವೃತ್ತ, ಸರ್ಕಾರಿ ಆಸ್ಪತ್ರೆ ಮುಂಭಾಗ, ಕೆಳಗೋಟೆ, ಒನಕೆ ಓಬವ್ವ ವೃತ್ತ, ವಿ.ಪಿ.ಬಡಾವಣೆ, ಜೆಸಿಆರ್ ಬಡಾವಣೆ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಸಂಚಾರ ಮಾಡುವುದರ ಮೂಲಕ ಏ.30 ರಂದು ನಡೆಯುವ ಬಸವೇಶ್ವರರ ಜಯಂತಿ ಕಾರ್ಯಕ್ರಮಕ್ಕೆ ಎಲ್ಲರನ್ನು ಆಹ್ವಾನ ಮಾಡಲಾಯಿತು.
ಏ. 30ರ ಮಧ್ಯಾಹ್ನ 3 ಗಂಟೆಗೆ ವೀರಶೈವ ಸಮಾಜದ ಹಾಗೂ ಜಿಲ್ಲಾಡಳಿತದವತಿಯಿಂದ ಶ್ರೀ ನೀಲಕಂಠೇಶ್ವರ ದೇವಾಲಯದಿಂದ ಶ್ರೀ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ಇದರ ಉದ್ಘಾಟನೆಯನ್ನು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹಾಗೂ ಜನಪದ ಕಲಾ ಮೇಳದ ಉದ್ಘಾಟನೆಯನ್ನು ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ ಉದ್ಘಾಟನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಜಿಲ್ಲಾಧಿಕಾರಿಗಳಾದ ಟಿ.ವೆಂಕಟೇಶ್ ಭಾಗವಹಿಸಲಿದ್ದಾರೆ.
ಮೆರವಣಿಗೆಯಲ್ಲಿ ಸುಮಾರು 10 ರಿಂದ 15 ಕಲಾ ತಂಡಗಳು ಭಾಗವಹಿಸಲಿದ್ದು, ಅಂದು ಮಧ್ಯಾಹ್ನ 3 ಗಂಟೆಯಿಂದ ಸಚಿವರು, ಶಾಸಕರು ಮೆರವಣಿಗೆಯನ್ನು ಉದ್ಘಾಟನೆ ಮಾಡಿದ ನಂತರ ಮೆರವಣಿಗೆಯೂ ಸಂತೇಪೇಟೆವೃತ್ತ, ಅನೆಬಾಗಿಲು, ಚಿಕ್ಕಪೇಟೆ, ಉಚ್ಚಂಗಿಯಲ್ಲಮ್ಮ ದೇವಾಲಯ, ದೊಡ್ಡಪೇಟೆ, ರಂಗಯ್ಯನಬಾಗಿಲು, ಬಸವಮಂಟಪ, ಗುರುಭವನ, ಡಾ.ಬಿ.ಆರ್.ಅಂಬೇಡ್ಕರ್ವೃತ್ತ, ಮಹಾವೀರವೃತ್ತ, ಎಸ್.ಬಿ.ಎಂ.ವೃತ್ತ, ಬಿ.ಡಿ.ರಸ್ತೆಯ ಮೂಲಕ ಮರಳಿ ಶ್ರೀ ನೀಲಕಂಠೇಶ್ವರ ದೇವಾಲಯ ತಲುಪಲಿದೆ ಎಂದರು.
ಈ ಮೆರವಣಿಗೆಯಲ್ಲಿ ಶ್ರೀ ಜಗದ್ಗುರು ಮುರಾಘರಾಜೇಂದ್ರ ಬೃಹನ್ಮಠ, ವೀರಶೈವ ಸಮುದಾಯದ ವಿವಿಧ ಸಂಘಟನೆಯ ನೌಕರರು, ಪದಾಧಿಕಾರಿಗಳು, ಸಿಬ್ಬಂದಿ ವರ್ಗ, ಜಂಗಮ ಸಮಾಜ, ಅಖಿಲ ಭಾರತ ವೀರಶೈವ ಮಹಾಸಭಾ, ಪಂಚಮಸಾಲಿ ಸಂಘ, ಸಾಧು-ಸದ್ದರ್ಮ, ಶಿವಸಿಂಪಿ, ಮಹಿಳಾ ಘಟಕ, ಗಾಣಿಗ, ಕುಂಚಿಟಿಗ, ಹೇಮರೆಡ್ಡಿ ಮಲ್ಲಮ್ಮ, ಕುಂಬಾರ, ಹಡಪದ, ನೊಳಂಬ ಸಮಾಜ ಯುವ ವೇದಿಕೆ, ಯುವ ಘಟಕ ಸೇರಿದಂತೆ ಇತರೆ ಸಂಘಟನೆಗಳ ಪದಾಧಿಕಾರಿಗಳು ಚಿತ್ರದುರ್ಗದ ಸುತ್ತಾ-ಮುತ್ತಲ್ಲಿನ ಜನತೆ ಭಾಗವಹಿಸಲಿದ್ದಾರೆ
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಕಾರ್ಯದರ್ಶಿ ವಿರೇಂದ್ರಕುಮಾರ್, ವೀರಶೈವ ಲಿಂಗಾಯತ ಯುವ ವೇದಿಕೆಯ ಅಧ್ಯಕ್ಷ ಮಂಜುನಾಥ್ (ದಾಳಿಂಬೆ) ವೀರಶೈವ ಸಮಾಜದ ಮುಖಂಡರಾದ ಸೈಟ್ ಬಾಬಣ್ಣ, ಜಿಮ್ಮಿ ಆಶೋಕ್, ಮಹಡಿ ಶಿವಮೂರ್ತಿ, ವಿರೇಶ್, ಕಾರ್ತಿಕ್, ಗಣೇಶ್, ಶಿವಯೋಗಿ, ನಂದಿಪುರ ನಾಗರಾಜ್, ಪರಮೇಶ್, ರುದ್ರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.