ಬೆಂಗಳೂರು: ಅಕ್ಷಯ ತೃತೀಯಾ ದಿನವಾದ ಇಂದು ನಟ ಉಪೇಂದ್ರ ಅಭಿನಯದ ಚಿತ್ರದ ಹೆಸರು ಅನಾವರಣಗೊಂಡಿದೆ.
ಈ ಕುರಿತಂತೆ ಆನಂದ್ ಆಡಿಯೋ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಟೈಟಲ್ ಅನಾವರಣಗೊಳಿಸಿದೆ, ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ ಈ ವಿಷಯ ಹಂಚಿಕೊಂಡಿದ್ದಾರೆ ಹಿರಿಯ ನಿರ್ದೇಶಕ ನಾಗಣ್ಣ ಚಿತ್ರವನ್ನು ನಿರ್ದೇಶಿಸಲಿದ್ದು, ‘ಸೂರಪ್ಪ’ ಬಾಬು ನಿರ್ಮಾಣದ ಚಿತ್ರಕ್ಕೆ ರಾಂಬಾಬು ಪ್ರೊಡಕ್ಷನ್ಸ್ ಬ್ಯಾನರ ಅಡಿ ನಿರ್ಮಾಣಗೊಳ್ಳತ್ತಿದ್ದು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ, ರಾಜರತ್ನಂ ಅವರ ಛಾಯಾಗ್ರಹಣವಿದ್ದು, ಅನಾವರಣಗೊಂಡಿರುವ ಚಿತ್ರಕ್ಕೆ ‘ಭಾರ್ಗವ’ ಎಂದು ಹೆಸರಿಡಲಾಗಿದೆ. ‘ಭಾರ್ಗವ’ ಎಂದರೆ, ವಿಷ್ಣುವಿನ ಆರನೇ ಅವತಾರ, ಪರಶುರಾಮನೆಂದು ನಂಬಲಾಗುತ್ತದೆ.