ಜಾತಿ, ವರ್ಣ, ಲಿಂಗಭೇದ ವಿರೋಧಿಸಿದ ಬಸವಣ್ಣ: ಸಿಇಓ ಎಸ್.ಜೆ.ಸೋಮಶೇಖರ್ ಅಭಿಮತ 

WhatsApp
Telegram
Facebook
Twitter
LinkedIn

 

ಚಿತ್ರದುರ್ಗ : ಜಾತಿ, ವರ್ಣ ಹಾಗೂ ಲಿಂಗಭೇದಗಳನ್ನು 900 ವರ್ಷಗಳ ಹಿಂದೆಯೇ ವಿರೋಧಿಸಿದ್ದ ಬಸವಣ್ಣನವರ ಆಲೋಚನೆಗಳು ಕಾಂತ್ರಿಕಾರಿಯಾಗಿದ್ದವು ಎಂದು ಜಿಲ್ಲಾ ಪಂಚಾಯಿತಿ ಸಿಇಓ ಎಸ್.ಜೆ.ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಸಾಂಸ್ಕøತಿಕ ನಾಯಕ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.

ಬಸವಣ್ಣವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ ಮತ್ತು ಶರಣ ಶರಣೆಯರ ಸಮಾಜದಲ್ಲಿ ಎಲ್ಲಾ ವರ್ಗದ ಜನಗರಿಗೂ ಪ್ರಾತಿನಿಧ್ಯವಿತ್ತು ಇವತ್ತಿನ ಸಂಸತ್ತಿನ ಮಾದರಿಯಲ್ಲಿಯೇ ಅಂದಿನ ಅನುಭವ ಮಂಟಪ ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಣೆಗಳಿಗೆ ದಾರಿ ದೀಪವಾಗಿತ್ತು. ಜಗತ್ತು ಇರುವವರೆಗೂ ಬಸವಣ್ಣನವರ ತತ್ವ, ಸಿದ್ಧಾಂತ ಹಾಗೂ ವಿಚಾರಗಳು ಪ್ರಸ್ತುವಾಗುತ್ತವೆ ಎಂದು ಎಸ್.ಜೆ.ಸೋಮಶೇಖರ್ ಹೇಳಿದರು.

ಸರ್ಕಾರ ವೀರಶೈವ ಅಭಿವೃದ್ಧಿ ನಿಗಮ ಸ್ಥಾಪಿಸಿ, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಒದಗಿಸುತ್ತಿದೆ. ಅಧಿಕಾರಿಗಳು ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ವಿಶ್ವಕ್ಕೆ ಬಸವಣ್ಣನವರ ಚಿಂತನೆಗಳನ್ನು ಪಸರಿಸುವ ದೃಷ್ಟಿಯಿಂದ ಅಂತರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರ ಸ್ಥಾಪನೆಯಾಗಬೇಕು. ಶರಣ ಸಾಹಿತ್ಯದ ಅಪ್ರಕಟಿತ ವಚನಗಳ ಪ್ರಕಟಣೆಯಾಗಿ ಪ್ರಚುರವಾಬೇಕು. ಈ ಕುರಿತು ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ ಎಂದು ಎಸ್.ಜೆ.ಸೋಮಶೇಖರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮನಗಳಲ್ಲಿ ಬಸವಣ್ಣನವರ ತತ್ವಗಳನ್ನು ಅನಾವರಣ ಮಾಡಿಕೊಳ್ಳಬೇಕು. ಆಗ ಮಾತ್ರ ಸಮಸಮಾಜ ನಿರ್ಮಾಣವಾಗುತ್ತದೆ. ಬಸವಣ್ಣವರ ತತ್ವದಲ್ಲಿ ಕಾಯಕ ಹಾಗೂ ದಾಸೋಹಕ್ಕೆ ಹೆಚ್ಚಿನ ಮಹತ್ವವಿದೆ. ಕಾಯಕ ಎನ್ನುವುದು ಸಂಪತ್ತಿನ ಉತ್ಪಾದಕತೆಯಾದರೆ, ದಾಸೋಹ ಎನ್ನುವುದು ಉತ್ಪಾದನೆಯಾದ ಸಂಪತ್ತಿನ ಸಮಾನ ಹಂಚಿಕೆಯ ತತ್ವವಾಗಿದೆ. ಬಸವಣ್ಣನವರ ನಡೆ ಹಾಗೂ ನುಡಿಯಲ್ಲಿ ಅಂತರವಿರಲಿಲ್ಲ. ನಡೆದ ಹಾಗೆಯೇ ನುಡಿದರು, ನುಡಿದ ಹಾಗೆಯೇ ಬದುಕಿದರು ಎಂದರು.

ಇಂದಿಗೂ ಸಮಾಜದಲ್ಲಿ ಜಾತಿ ವ್ಯವಸ್ಥೆ ಬದಲಾಗಿಲ್ಲ. ಇದಕ್ಕೆ ವೀರಶೈವ ಸಮಾಜವೂ ಹೊರತಾಗಿಲ್ಲ.  ಸಾದರು, ಬಣಜಿಗರು, ಪಂಚಮಸಾಲಿಗಳು, ಗಾಣಿಕರಾ, ಹೀಗೆ ವಿವಿಧತೆಯಿಂದ ನೋಡುವ ಪರಿಸ್ಥಿತಿಯಿದೆ. ಇಂತಹ ಜಾತಿ ಸಂಕೋಲೆಗಳಿಂದ ಎಲ್ಲರೂ ಹೊರಬರಬೇಕು. ಎಲ್ಲ ಜಾತಿ ಹಾಗೂ ಧರ್ಮಗಳ ಜನರನ್ನು ಎಲ್ಲರೂ ಒಪ್ಪಿಗೊಂಡಾಗಲೇ ಸಮಾಜದಲ್ಲಿ ಆರೋಗ್ಯಕರ ವಾತಾವರಣ ಮೂಡಲು ಸಾಧ್ಯ. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಆಯ್ದಕ್ಕಿ ಲಕ್ಕಯ್ಯ, ಡೋಹಾರ ಕಕ್ಕಯ್ಯ, ಮಾದಾರ ಚನ್ನಯ್ಯ, ಸೂಳೆ ಸಂಕವ್ವ  ಸೇರಿದಂತೆ ಎಲ್ಲಾ ಜಾತಿ ವರ್ಗದವರು ಇದ್ದರು. ಅಕ್ಕಮಹಾದೇವಿ ಸೇರಿದಂತೆ ಹಲವಾರು ಸ್ತ್ರೀಯರಿಗೂ ಅನುಭವ ಮಂಟಪದಲ್ಲಿ ಸ್ಥಾನವಿತ್ತು. ಸ್ತ್ರೀಯರಿಗೂ ಸಮಾನ ಅವಕಾಶ ನೀಡಿದ ಧರ್ಮ ಸಂಸತ್ತು  ಅನುಭವ ಮಂಟಪವಾಗಿದೆ. ವಿಶ್ವ ಸಾಹಿತ್ಯಕ್ಕೆ ಕನ್ನಡದ ಕೊಡುಗೆಗಳಲ್ಲಿ ವಚನ ಸಾಹಿತ್ಯ ಮೇಲ್ಪಂಕ್ತಿಯಲ್ಲಿ ಬರುತ್ತದೆ. ಪಂಡಿತ ಹಾಗೂ ಪಾಮರರೂ ಸಹ ತಮ್ಮ ತಮ್ಮ ಅನುಭವಗಳನ್ನು ವಚನ ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ಬಿ.ಟಿ. ಕುಮಾರಸ್ವಾಮಿ ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಮಾತನಾಡಿ, 2018 ರಲ್ಲಿ ಸರ್ಕಾರ ಬಸವಣ್ಣವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸುವಂತೆ ಆದೇಶ ಮಾಡಿತು. ನಂತರದಲ್ಲಿ ಬಸವಣ್ಣವನರನ್ನು ರಾಜ್ಯದ ಸಾಂಸ್ಕøತಿಕ ನಾಯಕ ಎಂದು ಘೋಷಿಸಲಾಗಿದೆ. ಬಸವಣ್ಣವರ ಆಶಯಗಳಂತೆ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್ ಮಾತನಾಡಿ ಬಸಣ್ಣನವರ ತತ್ವಗಳನ್ನು ಪರಿಪೂರ್ಣವಾಗಿ ಪಾಲನೆ ಮಾಡಿದರೆ ಸಮಾಜದಲ್ಲಿ ಸಮಾನತೆ ಮೂಡಲು ಸಾಧ್ಯ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಎನ್.ತಿಪ್ಪೇಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶಿವಮೂರ್ತಿ ಮಹಡಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜ್ಞಾನಭಾರತಿ ವಿದ್ಯಾಸಂಸ್ಥೆ ಪ್ರಾಂಶುಪಾಲ ಡಾ.ಪ್ರಜ್ವಲ್.ಬಿ.ಎಂ. ವಿಶೇಷ ಉಪನ್ಯಾಸ ನೀಡಿದರು.

ನಗರ ಸಭೆ ಅಧ್ಯಕ್ಷೆ ಸುಮಿತಾ.ಬಿ.ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಉಪವಿಭಾಗಾಧಿಕಾರಿ ಮಹಬೂಬ್ ಜಿಲಾನಿ ಖುರೇಷಿ, ನಗರಸಭೆ ಪೌರಾಯುಕ್ತೆ ರೇಣುಕಾ,  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ್, ರಂಗಕರ್ಮಿ ಕೆಪಿಎಂ ಗಣೇಶಯ್ಯ, ಮುಖಂಡರುಗಳಾದ ಪಿ.ವೀರೇಂದ್ರಕುಮಾರ್, ಶಶಿಧರಬಾಬು, ಜಾಲಿಕಟ್ಟೆ ಶಿವರುದ್ರಪ್ಪ, ಜಿ.ಎಸ್.ಉಜ್ಜನಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಫೋಟೊ ಶೀರ್ಷಿಕೆ: ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಬಸವಣ್ಣವರ ಭಾವಚಿತ್ರಕ್ಕೆ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಗ್ಯಾರೆಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್,  ಸಮಾಜದ ಮುಖಂಡರುಗಳಾದ ಹೆಚ್.ಎನ್.ತಿಪ್ಪೇಸ್ವಾಮಿ, ಶಿವಮೂರ್ತಿ ಮಹಡಿ ಸೇರಿದಂತೆ ಮತ್ತಿರರು ಪುಷ್ಪ ನಮನ ಸಮರ್ಪಣೆ ಮಾಡಿದರು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon