ಮಂಗಳೂರು : ಹಿಂದೂ ಕಾರ್ಯಕರ್ತ ಹತ್ಯೆಗೆ ಸಂಬಂಧಿಸಿದಂತೆ ಪೋಲಿಸರು 30 ಕ್ಕೂ ಅಧಿಕ ಜನರ ವಿಚಾರಣೆ ನಡೆಸಿದ್ದಾರೆಂದು ತಿಳಿದಿದೆ.
ಈ ಕೃತ್ಯ ಪ್ರೀ ಪ್ಲಾನ್ ಆಗಿ ನಡೆಸಿದ್ದು ಘಟನಾ ಸ್ಥಳದ ವಿಡಿಯೋ ಸರಿಯಾಗಿ ಗಮನಿಸಿದರೆ ಹಲವು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.ಸುವಾಸ್ ಶೆಟ್ಟಿ ಚಲನವಲನದ ಇಂಚಿಂಚು ಮಾಹಿತಿ ಸ್ಥಳೀಯರು ನೀಡಿದ್ದಾರೆಂದು ಮಾಹಿತಿ ದೊರೆತಿದೆ.
ಬಜ್ಪೆ ಪರಿಸರದಲ್ಲಿ ಆರೋಪಿಗಳಿಗೆ ಸ್ಥಳೀಯರ ನೆರವು ನೀಡಿದ್ದು ಘಟನಾ ಸಂಧರ್ಭದ ಸಿಸಿಟಿವಿ ಫೂಟೇಜ್,ಮೊಬೈಲ್ ವಿಡಿಯೋ ಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಸುಹಾಸ್ ಕಾರ್ ಬರೋ ಟೈಮಿಂಗ್ಸ್ ,ಇಕ್ಕಟ್ಟಾದ ಪ್ರದೇಶದಲ್ಲಿ ಅಡ್ಡ ಹಾಕೋ ಪ್ಲಾನ್ ಎಲ್ಲಾ ಸ್ಥಳೀಯರದ್ದೇ ಮಾಹಿತಿ ಎಂದು ಬಹಿರಂಗವಾಗಿದೆ.ಈ ಕೃತ್ಯದಲ್ಲಿ ಸ್ಥಳೀಯ ಕೆಲ ಪೋಲಿಸರು ಕೂಡ ನೆರವು ನೀಡಿದ್ದಾರೆಂದು ಮಾಹಿತಿ ಕೂಡ ದೊರೆತಿದೆ.ಅರೋಪಿಗಳು ಬಜಪೆ ಠಾಣೆಯಲ್ಲಿ ರಾಜಾರೋಶವಾಗಿ ಬಂದು ಹೋಗುತ್ತಿದ್ದರೆಂದು ಮಾಹಿತಿ ದೊರೆತಿದೆ.