ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಂಬನ್ನಲ್ಲಿ ಸೇನಾ ವಾಹನವೊಂದು ಪ್ರದೇಶದಲ್ಲಿ ಸೇನಾ ಟ್ರಕ್ 300 ಮೀಟರ್ ಆಳದ ಕಂದಕಕ್ಕೆ ಬಿದ್ದು ಮೂವರು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಸೈನಿಕರ ಮೃತದೇಹವನ್ನು ರಾಂಬನ್ ಜಿಲ್ಲಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮೃತ ಸೈನಿಕರನ್ನು ಅಮಿತ್ ಕುಮಾರ್, ಸುಜೀತ್ ಕುಮಾರ್ ಮತ್ತು ಮನ್ ಬಹದ್ದೂರ್ ಎಂದು ಗುರುತಿಸಲಾಗಿದೆ. ಸೇನಾ ವಾಹನ ಬಿದ್ದ ರಭಸಕ್ಕೆ ಛಿದ್ರಗೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ಸೇನಾ ವಾಹನದ ಫೋಟೋ ವೈರಲ್ ಆಗಿದೆ. ಫೋಟೋದಲ್ಲಿ ವಾಹನದ ಅವಶೇಷಗಳು, ಸೈನಿಕರ ಶವಗಳು, ಸೈನಿಕರ ಬಳಿ ಇದ್ದ ಕಾಗದ ಪತ್ರಗಳು ಹರಡಿಕೊಂಡಿರುವುದನ್ನು ನೋಡಬಹುದಾಗಿದೆ, ಸೇನಾ ಟ್ರಕ್ ಜಮ್ಮುವಿನಿಂದ ಶ್ರೀನಗರಕ್ಕೆ ಬೆಂಗಾವಲು ಪಡೆಯೊಂದಿಗೆ ಹೋಗುತ್ತಿತ್ತು.
ಈ ಸಮಯದಲ್ಲಿ ಅದು ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದಿತು. ಪೊಲೀಸರು, ಎಸ್ಡಿಆರ್ಎಫ್ ಮತ್ತು ಸೇನಾ ತಂಡಗಳು ಹಗ್ಗಗಳ ಸಹಾಯದಿಂದ ಮೃತ ಸೈನಿಕರ ಶವಗಳನ್ನು ಹೊರತೆಗೆಯಲಾಗಿದೆ,