ನಾವೆಲ್ಲರೂ ಆಧಾರ್ ಕಾರ್ಡ್ ಹೊಂದಿರುತ್ತೇವೆ, ಆದರೆ ನೀಲಿ ಆಧಾರ್ ಕಾರ್ಡ್ (Blue Aadhaar Card) ಬಗ್ಗೆ ನೀವು ಕೇಳಿದ್ದೀರಾ? ಏನಿದು ನೀಲಿ ಆಧಾರ್ ಕಾರ್ಡ್? ಇಲ್ಲಿದೆ ಇದರ ಬಗ್ಗೆ ಮಾಹಿತಿ.
ನಮ್ಮ ದೇಶದಲ್ಲಿ ಸದ್ಯ ಭಾರತೀಯ ನಾಗರಿಕನ ಬಹುಮುಖ್ಯ ಗುರುತಿನ ಚೀಟಿಗಾಗಿ ಆಧಾರ್ ಕಾರ್ಡ್ ಕಾರ್ಡ್ ಬಳಸಲಾಗುತ್ತದೆ, ಯಾವುದೇ ಸರಕಾರಿ ಅಥವಾ ಯಾವುದೇ ಕೆಲಸಗಳಲ್ಲಿ ಮುಖ್ಯ ದಾಖಲೆಯಾಗಿ ಆಧಾರ್ ಕಾರ್ಡ್ ಬಳಸಲಾಗುತ್ತದೆ, ಈ ಆಧಾರ್ ನಲ್ಲಿ ನಮ್ಮ ಹೆಸರು ವಿಳಾಸ, ಬಯೋ ಮೆಟ್ರಿಕ್ ಜೊತೆಗೆ ನಮ್ಮ ಎಲ್ಲಾ ವಿವರಗಳೂ ಅಡಕವಾಗಿರುತ್ತದೆ, ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ನಲ್ಲೂ ಪ್ರತ್ಯೇಕ 12 ಅಂಕೆಗಳ ಆಧಾರ್ ಸಂಖ್ಯೆ ನಮೂದಾಗಿರುತ್ತದೆ, ಈ ಆಧಾರ್ ಕಾರ್ಡ್ ನಂತೆ ನೀಲಿ ಆಧಾರ್ ಕೂಡ ಚಾಲ್ತಿಯಲ್ಲಿದ್ದು, ಏನಿದು ಬ್ಲೂ ಆಧಾರ್ ಕಾರ್ಡ್? ಯಾರು ಈ ಕಾರ್ಡ್ ಹೊಂದಬಹುದು ಎನ್ನುವ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಸಾಮಾನ್ಯ ನಾಗರಿಕರಿಗೆ ಒಂದೇ ರೀತಿಯ ಆಧಾರ್ ಕಾರ್ಡ್ ಇರಲಿದ್ದು, 5 ಅಥವಾ 5 ವರ್ಷಕ್ಕಿಂತ ಸಣ್ಣ ಮಕ್ಕಳಿಗೆ ನೀಲಿ ಬಣ್ಣದ ಆಧಾರ್ ಕಾರ್ಡ್ ನೀಡಲಾಗುತ್ತದೆ, ಈ ಕಾರ್ಡ್ 5 ವರ್ಷದಿಂದ ಕೆಳಗಿನ ಮಕ್ಕಳಿಗೆ ಮಾತ್ರ ನೀಡಲಾಗುತ್ತದೆ ಇದನ್ನು ಮಕ್ಕಳ ಆಧಾರ್ ಕಾರ್ಡ್ ಎನ್ನಲಾಗುತ್ತದೆ.
ಈ ನೀಲಿ ಆಧಾರ್ ಕಾರ್ಡ್ ಗೆ ಯಾವುದೇ ಬಯೋ ಮೆಟ್ರಿಕ್ ಅಗತ್ಯವಿರುವುದಿಲ್ಲ, ಇದರಲ್ಲೂ ಆಧಾರ್ ಕಾರ್ಡ್ ನಂತೆ 12 ಅಂಕೆಗಳ ಆಧಾರ್ ಸಂಖ್ಯೆ ದಾಖಲಾಗಿರುತ್ತದೆ, ಈ ಆಧಾರ್ ಕಾರ್ಡ್ ಮಾಡಿಸಲು ಮಗುವಿನ ಜನನ ಪ್ರಮಾಣ ಪತ್ರ ಹಾಗೂ ಪೋಷಕರ ಆಧಾರ್ ಕಾರ್ಡ್ ಇದ್ದರೆ ಸಾಕು.
ಈ ಆಧಾರ್ ಕಾರ್ಡ್ ಅನ್ನು ಮಗು 5 ವರ್ಷ ದವರೆಗೆ ಮಾತ್ರ ಬಳಸಬಹುದಾಗಿದ್ದು, ನಂತರ ಈ ಆಧಾರ್ ಕಾರ್ಡ್ ಅನ್ನು ಸಾಮಾನ್ಯ ಆಧಾರ್ ಕಾರ್ಡ್ ಗೆ ಅಪ್ಡೇಟ್ ಮಾಡಿಸಿಕೊಳ್ಳಬೇಕು.
ನೀಲಿ ಆಧಾರ್ ಕಾರ್ಡ್ (Blue Aadhaar Card) ಪಡೆಯುವು ಹೇಗೆ?
ನೀಲಿ ಆಧಾರ್ ಕಾರ್ಡ್ ಪಡೆಯಲು ನೀವು ಆಧಾರ್ UIDAI ವೆಬ್ಸೈಟ್ ನಲ್ಲಿ ಪೋಷಕರ ಆಧಾರ್ ಸಂಖ್ಯೆ ನೊಂದಾಯಿಸಿ 5 ಅಥವಾ 5 ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡ್ ಪಡೆಯಬಹುದಾಗಿದೆ. ಈ ನೋಂದಾವಣೆ ಪ್ರಕ್ರಿಯೆಗೆ ನೀವು ಹತ್ತಿರದ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಬೇಕು.
ನೀವು ನೋಂದಾಯಿಸಿದ 60 ದಿನದಲ್ಲಿ ನಿಮ್ಮ ವಿಳಾಸಕ್ಕೆ ನೇರವಾಗಿ ಅಂಚೆಯ ಮೂಲಕ ಈ ಆಧಾರ್ ಕಾರ್ಡ್ ತಲುಪಲಿದೆ.