ಇಸ್ಲಮಾಬಾದ್ : ಬಾರತವು ಪಾಕಿಸ್ತಾನದ ವಿರುದ್ಧ ಮುಗಿಬೀಳುವುದಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿರುವಾಗಲೇ ಇತ್ತ ಪಾಕಿಸ್ತಾನದ ಸೇನೆಯಲ್ಲಿ ಬಂಡಾಯ ಮತ್ತಷ್ಟು ಜೋರಾಗಿದ್ದು, ಬಲೂಚ್, ಪಖ್ತೂನ್ ರೆಜಿಮೆಂಟ್ ನಲ್ಲಿ ಸುಮಾರು 800 ಕ್ಕೂ ಹೆಚ್ಚು ಸೈನಿಕರು ಪಾಕಿಸ್ತಾನದ ಸೇನೆಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ನಮ್ಮದೇ ಜನರ ವಿರುದ್ಧ ನಾವು ಹೋರಟ ಮಾಡಲ್ಲ. ಭಾರತದ ಸೈನಿಕರ ವಿರುದ್ದ ಯಾವುದೇ ಕಾರಣಕ್ಕೂ ಯುದ್ಧ ಮಾಡುವುದಿಲ್ಲ ಎಂದು 800 ಕ್ಕೂ ಹೆಚ್ಚು ಸೈನಿಕರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಮೊದಲೇ ಬಲೂಚಿಸ್ತಾನಿ ಹೋರಾಟಗಾರರ ದಾಳಿಯಿಂದ ತತ್ತರಿಸಿರುವ ಪಾಕಿಸ್ತಾನ ಸೇನೆಗೆ ಇದೀಗ ಭಾರೀ ಆಘಾತ ನೀಡಿದೆ. ಭಾರತದ ವಿರುದ್ಧ ಪದೇಪದೇ ಉಗ್ರರನ್ನು ಬಿಟ್ಟು ಅಮಾಯಕರ ರಕ್ತ ಹರಿಸುತ್ತಿರುವ ಪಾಕಿಸ್ತಾನಕ್ಕೆ ಈಗ ಭಾರತದ ಯುದ್ಧದ ಭೀತಿ ಕಾಡಲಾರಂಭಿಸಿದ್ದು, ಭಾರತ ಪೂರ್ಣಪ್ರಮಾಣದ ಯುದ್ಧ ಘೋಷಣೆ ಮಾಡಿದ್ದಲ್ಲಿ ಪಾಕಿಸ್ತಾನ ನಿರ್ನಾಮ ಆಗುವುದು ನಿಶ್ಚಿತ ಎನ್ನಲಾಗುತ್ತಿದೆ